ADVERTISEMENT

ದೇಗುಲಕ್ಕೆ ಬಂದ ದೈವಗಳ ಭಂಡಾರ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 3:12 IST
Last Updated 19 ನವೆಂಬರ್ 2017, 3:12 IST

ಸುಬ್ರಹಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಚಂಪಾಷಷ್ಠಿ ಜಾತ್ರೆ ಪ್ರಯುಕ್ತ ದೇವರಗದ್ದೆಯ ಹೊಸಳಿಗಮ್ಮ ದೈವದ ಗುಡಿಯಿಂದ ಲಕ್ಷದೀಪೋತ್ಸವ ದಿನ ಶುಕ್ರವಾರ ಬೆಳಿಗ್ಗೆ ಶ್ರೀ ದೈವದ ಭಂಡಾ ರವು ದೇವಸ್ಥಾನಕ್ಕೆ ಬಂದಿತು.

ದೇವರಗದ್ದೆಯ ದೈವದ ಗುಡಿ ಯಲ್ಲಿ ಪೂಜೆಯ ಬಳಿಕ, ಬ್ಯಾಂಡ್ ಮಂಗಳವಾದ್ಯ ಮತ್ತು ಬಿರುದಾ ವಳಿಗಳೊಂದಿಗೆ ಶ್ರೀ ದೈವದ ಭಂಡಾರ ವನ್ನು ದೇವಸ್ಥಾನಕ್ಕೆ ತರಲಾಯಿತು.

ಹೊಸಳಿಗಮ್ಮ ಗುಡಿಯ ಅರ್ಚಕ ನಾರಾಯಣ ಭಟ್, ಮೋಂಟ ಗುರಿ ಕಾರ, ದೇವಳದ ಸಿಬ್ಬಂದಿ ನಾಗೇಶ ಮಲೆಕುಡಿಯ, ಷಣ್ಮುಖ ಹೆಬ್ಬಾರ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕೃಷ್ಣ ಮೂರ್ತಿ ಭಟ್, ಮಾಧವ ದೇವರಗದ್ದೆ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.