ADVERTISEMENT

ಪಿಂಚಣಿ ಯೋಜನೆಗೆ ಸ್ಪಂದನೆ: ಅಭಯಚಂದ್ರ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 8:37 IST
Last Updated 17 ಸೆಪ್ಟೆಂಬರ್ 2013, 8:37 IST

ಮೂಲ್ಕಿ: ಕಳೆದೆರಡು ವರ್ಷಗಳಲ್ಲಿ ಅನೇಕ ವೃದ್ಧರು, ಅಂಗವಿಕಲರು, ವಿಧವೆಯರು ಪಿಂಚಣಿ ಭಾಗ್ಯದಿಂದ ವಂಚಿತರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಅಂತವರನ್ನು ಗುರುತಿಸಿ ಅವರಿಗೆ ಪಿಂಚಣಿ ಯೋಜನೆಯಲ್ಲಿ ಸೇರಿಸಲು ಅಧಿಕಾರಿಗಳು ಮತ್ತು ಜನಪ್ರತಿ­ನಿಧಿಗಳು ಜಂಟಿಯಾಗಿ ಶ್ರಮಿಸಬೇಕು. ಈ ಯೋಜನೆಗೆ ಸರ್ಕಾರದ ಸ್ಪಂದನೆ ಇದೆ ಎಂದು ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.

ಮೂಲ್ಕಿಯ ಪಟ್ಟಣ ಪಂಚಾ­ಯಿತಿಯಲ್ಲಿ ಇತ್ತೀಚೆಗೆ ಪಿಂಚಣಿ ಅದಾಲತ್‌ನಲ್ಲಿ ವಿವಿಧ ಫಲಾನು­ಭವಿಗಳಿಗೆ ಅರ್ಹತಾ ಪತ್ರವನ್ನು ವಿತರಿಸಿ ಮಾತನಾಡಿದರು.

ಬಡ ಕುಟುಂಬಗಳಿಗೆ ಪರಿಹಾರದ ರೂಪದ ಹಣವನ್ನು 10 ರಿಂದ 20 ಸಾವಿರಕೆ್ಕ ಏರಿಸಲಾಗಿದೆ ಎಂದರು. ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಶಿಕಾಂತ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.

ಮೂಲ್ಕಿ ಹೋಬಳಿಯ 77 ಜನರಿಗೆ ಪಿಂಚಣಿ ಪತ್ರವನ್ನು ಸಮಾರಂಭದಲ್ಲಿ ವಿತರಿಸಲಾಯಿತು. ಉಪಾಧ್ಯಕ್ಷ ಯೋಗೀಶ್‌ ಕೋಟ್ಯಾ­ನ್‌, ಸದಸ್ಯ ಪುತ್ತುಬಾವ, ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ಸುವರ್ಣ, ಸಹಾಯಕ ಆಯುಕ್ತ ಪ್ರಶಾಂತ, ಮುಖ್ಯಾಧಿಕಾರಿ ಹರಿಶ್ಚಂದ್ರ ಸಾಲ್ಯಾ­ನ್, ವಸಂತ ಬೆರ್ನಾಡ್, ಗೋಪಿನಾಥ ಪಡಂಗ, ಪುತ್ತುಬಾವ, ಅಬ್ದುಲ್ ರಜಾಕ್ ಇನ್ನಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.