ಕಾರ್ಕಳ: `ಬದುಕಿನ ಸಾರ್ಥಕತೆಗೆ ಸಂಸ್ಕಾರ ಅಗತ್ಯ~ ಎಂದು ಕಾಶೀ ಮಠದ ಸುಧೀಂದ್ರ ತೀರ್ಥ ಸ್ವಾಮೀಜಿ ಪಟ್ಟಶಿಷ್ಯ ಸಂಯಮೀಂದ್ರ ತೀರ್ಥ ಸ್ವಾಮೀಜಿ ಇಲ್ಲಿ ನುಡಿದರು.ತಾಲ್ಲೂಕಿನ ಸಾಣೂರು ಗೌಡ ಸಾರಸ್ವತ ಬ್ರಾಹ್ಮಣ ಸಭಾದ ರಾಮ ಮಂದಿರಕ್ಕೆ ಮಂಗಳವಾರ ಭೇಟಿ ನೀಡಿ ಆಶೀರ್ವಚನ ನೀಡಿದರು.
`ಇಂದಿನ ಯುವಪೀಳಿಗೆ ಶೈಕ್ಷಣಿಕ ವಲಯದಲ್ಲಿ ಉನ್ನತ ಸಾಧನೆ ತೋರುತ್ತಿರುವುದು ಅಭಿಮಾನದ ಸಂಗತಿ. ಅದರೊಂದಿಗೆ ಸದಾಚಾರ, ಸದ್ವಿಚಾರ, ಸಂಸ್ಕಾರಯುತ ನಡವಳಿಕೆ ಮತ್ತು ನಮ್ಮ ಆಚರಣೆಗಳ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ~ ಎಂದು ಕಿವಿಮಾತು ಹೇಳಿದರು.
~ಹಿರಿಯರು ಮಕ್ಕಳಿಗೆ ಮಮಕಾರ ಮಾತ್ರ ತೊರಿದರೆ ಸಾಕಾಗುವುದಿಲ್ಲ. ಅವರಲ್ಲಿ ಪ್ರೀತಿ ತೋರಿ ಅವರ ತಪ್ಪುಗಳನ್ನು ಮನವರಿಕೆ ಮಾಡಿಕೊಳ್ಳುವುದರಲ್ಲೂ ಹೆಚ್ಚಿನ ಗಮನ ಹರಿಸಬೇಕು. ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪರಂಪರೆ ಆಚಾರ-ವಿಚಾರಗಳಲ್ಲಿ ಯುವಜನಾಂಗ ಹೆಚ್ಚಿನ ಆಸಕ್ತಿ ವಹಿಸಬೇಕು~ ಎಂದರು.
ಸಾಣೂರು ಗೌಡ ಸಾರಸ್ವತ ಬ್ರಾಹ್ಮಣ ಸಭಾ ಅಧ್ಯಕ್ಷ ಎನ್.ಗಣೇಶ್ ಕಾಮತ್, ಕೋಶಾಧ್ಯಕ್ಷ ಎಸ್.ಸುಭಾಸ್ ಶೆಣೈ, ಸಭಾ ಕಾರ್ಯದರ್ಶಿ ಹಾಗೂ ಸಾಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್, ವಿಶ್ವನಾಥ ಕಾಮತ್, ಎನ್.ಸುರೇಶ್ ಕಾಮತ್, ಪಿ.ಸುಭಾಸ್ ಕಾಮತ್, ವಿವೇಕಾನಂದ ಶೆಣೈ, ಹಿರಿಯ ಉದ್ಯಮಿ ಬೋಳ ಪ್ರಭಾಕರ ಕಾಮತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.