ADVERTISEMENT

ಮಂಗಳೂರಿನ ಜನ ಶಾಂತಿಪ್ರಿಯರು

ಸುರೇಶ್‌ ಅವರಿಗೆ ಅಧಿಕಾರ ಹಸ್ತಾಂತರಿಸಿದ ವಿಪುಲ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 7:28 IST
Last Updated 19 ಜೂನ್ 2018, 7:28 IST
ಮಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ಟಿ.ಆರ್. ಸುರೇಶ್‌ ಅವರು ವಿಪುಲ್‌ಕುಮಾರ್‌ ಅವರಿಂದ ಸೋಮವಾರ ಅಧಿಕಾರ ವಹಿಸಿಕೊಂಡರು.
ಮಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ಟಿ.ಆರ್. ಸುರೇಶ್‌ ಅವರು ವಿಪುಲ್‌ಕುಮಾರ್‌ ಅವರಿಂದ ಸೋಮವಾರ ಅಧಿಕಾರ ವಹಿಸಿಕೊಂಡರು.   

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ವರ್ಗಾವ ರ್ಣೆಗೊಂಡಿದ್ದ ಟಿ.ಆರ್.ಸುರೇಶ್ ಅವರು, ಸೋಮವಾರ ಮತ್ತೆ ನಗರ ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿಸುತ್ತಿರುವ ಪೊಲೀಸ್ ಕಮೀಷನರ್ ವಿಪುಲ್‌ ಕುಮಾರ್ ಅಧಿಕಾರ ಹಸ್ತಾಂತರಿಸಿದರು.

ಇದಕ್ಕೂ ಮೊದಲು ಮಾಧ್ಯಮದವ ರೊಂದಿಗೆ ಮಾತನಾಡಿದ ವಿಪುಲ್‌ ಕುಮಾರ್‌, ಮಂಗಳೂರಿನ ಜನರು ಶಾಂತಿ ಪ್ರಿಯರು. ಆದಾಗ್ಯೂ ಮಂಗ ಳೂರಿನ ಬಗ್ಗೆ ಕೋಮುಗಲಭೆಯ ನಗರ ಎಂಬ ಹಣೆಪಟ್ಟಿಯಿದೆ. ಇದಕ್ಕೆ ಇಲ್ಲಿ ನಡೆಯುವ ಒಂದಷ್ಟು ಘಟನೆಗಳೇ ಕಾರಣ ಎಂದು ಹೇಳಿದರು.

ಕೆಲವೇ ಕೆಲವು ಸಮಾಜದ್ರೋಹಿ ಗಳಿಂದ ಮಂಗಳೂರಿಗೆ ಕೆಟ್ಟ ಹೆಸರು ಬಂದಿದೆ. ಆದರೆ ಬಹುಪಾಲು ಜನ ಶಾಂತಿ ಬಯಸುತ್ತಾರೆ. ಇನ್ನು ಉಳಿದ ಸಮಾಜದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮಂಗಳೂರು ಪೊಲೀಸರು ಸಮರ್ಥರಿದ್ದಾರೆ ಎಂದು ತಿಳಿಸಿದರು.

ADVERTISEMENT

‘ಮಂಗಳೂರು ಶೈಕ್ಷಣಿಕ ರಾಜಧಾನಿಯಾಗಿದೆ. ಇಲ್ಲಿನ ಜನರು ಸುಶಿಕ್ಷಿತರು. ನಗರ ಪೊಲೀಸ್‌ ಆಯುಕ್ತರಾಗಿ ಹೊರಡಿಸಿದ ಆದೇಶಗಳನ್ನು ಜನರು ಪಾಲಿಸಿದ್ದಾರೆ. ನಾವು ಜನರೊಂದಿಗೆ ಸಂವಹನ ನಡೆಸುತ್ತಲೇ ಇದ್ದೇವೆ. ಇಲ್ಲಿನ ಜನರಿಗೆ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಬೇಕಾಗಿದೆ’ ಎಂದು ಹೇಳಿದರು.

ಅಕ್ರಮ ಮರಳಿನ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲ ವ್ಯಕ್ತಿಗಳು ಮರಳನ್ನು ಸಂಗ್ರಹಿಸಿ ಇಟ್ಟುಕೊಂಡು, ಅಗತ್ಯ ಸಂದರ್ಭದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಾರೆ. ಇಂತಹ ಪ್ರಕರಣಗಳ ಬಗ್ಗೆ ಮಾಹಿತಿ ಬಂದಿದ್ದರಿಂದಲೇ ನಾವು ದಾಳಿ ಮಾಡಿ, ಮರಳು ವಶ ಪಡಿಸಿಕೊಂಡಿದ್ದೇವೆ. ಇಂತಹ 15 ಪ್ರಕರಣಗಳು ದಾಖಲಾಗಿದ್ದು, ಮರಳನ್ನು ಭೂ ಮತ್ತು ಗಣಿ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ವಿವರಿಸಿದರು.

ಬೀಟ್‌ ವ್ಯವಸ್ಥೆಯಲ್ಲಿರುವ ಪೊಲೀಸರು ಇಂತಹ ಮಾಹಿತಿಗಳನ್ನು ಸಂಗ್ರಹಿಸಬೇಕು. ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸುವ ಮೂಲಕ ಅಕ್ರಮಗಳನ್ನು ತಡೆಗಟ್ಟಲು ಮುಂದಾಗಬೇಕು. ಜನರಲ್ಲಿ ವಿಶ್ವಾಸ ವೃದ್ಧಿಸುವ ಉದ್ದೇಶದಿಂದಲೇ ಬೀಟ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಜನರೊಂದಿಗೆ ಮಾತುಕತೆ ನಡೆಸಬೇಕು. ಜನರಲ್ಲಿ ಧೈರ್ಯ ತುಂಬಬೇಕು. ಪೊಲೀಸರು ಮತ್ತು ನಾಗರಿಕರು ಒಗ್ಗಟ್ಟಾಗಿ ಅಪರಾಧಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್‌, ಎಸಿಪಿಗಳಾದ ಮಂಜುನಾಥ, ಎಂ. ಜಗದೀಶ್‌, ಕೆ. ರಾಮರಾವ್‌, ರಾಜೇಂದ್ರ ಡಿಎಸ್‌., ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ದುಷ್ಕೃತ್ಯಗಳನ್ನು ಎಸಗುವ ಯಾರೇ ಆಗಿದ್ದರೂ, ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆಗೆ ಸಹಕಾರ ನೀಡಬೇಕು
ವಿಪುಲ್‌ಕುಮಾರ್‌, ‌ನಿರ್ಗಮಿತ ನಗರ ಪೊಲೀಸ್ ಆಯುಕ್ತ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.