ADVERTISEMENT

`ಮಕ್ಕಳ ಕಲಾಪ್ರತಿಭೆ ಹತ್ತಿಕ್ಕಬಾರದು'

ಬೈಂದೂರು: `ಸುರಭಿ ಕಲಾ ಸಮ್ಮೊಹನ'

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 10:51 IST
Last Updated 12 ಡಿಸೆಂಬರ್ 2012, 10:51 IST

ಬೈಂದೂರು: ಮಕ್ಕಳಲ್ಲಿ ಒಂದಲ್ಲ ಒಂದು ಕಲಾಪ್ರತಿಭೆ ಸುಪ್ತವಾಗಿರುತ್ತದೆ. ಅದನ್ನು ಗುರುತಿಸಿ, ಬೆಳೆಯಲು ಅಗತ್ಯ ಅವಕಾಶ ಕಲ್ಪಿಸುವ ಕೆಲಸವನ್ನು ಹಿರಿಯರು ಮಾಡಬೇಕು. ಬದಲಾಗಿ ಪಠ್ಯ ಕಲಿಕೆಗೆ ಅವರ ಮೇಲೆ  ಒತ್ತಡ ಹೇರಿ, ಕಲಾಪ್ರತಿಭೆಯನ್ನು ಹತ್ತಿಕ್ಕುವ ಪ್ರವೃತ್ತಿ ಸಲ್ಲ ಎಂದು ಖ್ಯಾತ ಯಕ್ಷಗಾನ ಕವಿ ಡಾ.ವೈ. ಚಂದ್ರಶೇಖರ ಶೆಟ್ಟಿ ಹೇಳಿದರು.
ಇಲ್ಲಿನ ಸಾಂಸ್ಕೃತಿಕ, ಸಾಹಿತ್ಯ ಸೇವಾ ಪ್ರತಿಷ್ಠಾನ `ಸುರಭಿ'ಯ 12ನೆಯ ವಾರ್ಷಿಕೋತ್ಸವ ಪ್ರಯುಕ್ತ ಶಾರದಾ ವೇದಿಕೆಯಲ್ಲಿ  ಇತ್ತೀಚೆಗೆ ನಡೆದ `ಸುರಭಿ ಕಲಾ ಸಮ್ಮೊಹನ'ವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸುಪ್ರೀತಾ ದೀಪಕ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನವದೆಹಲಿಯ ರಾಜೀವ ಗಾಂಧಿ ವಿಶ್ವ ವಿದ್ಯಾಲಯದ ಸೆನೆಟ್ ಸದಸ್ಯ ಡಾ. ಭರತ್‌ಕುಮಾರ ಶೆಟ್ಟಿ ಗ್ರಾಮೀಣ ಭಾಗದಲ್ಲಿ ಕಲಾ ಪ್ರಕಾರಗಳ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ಸುರಭಿಯನ್ನು ಶ್ಲಾಘಿಸಿದರು.  ಲಾವಣ್ಯ ರಂಗ ವೇದಿಕೆಯ ಗೌರವಾಧ್ಯಕ್ಷ ಗಿರೀಶ ಬೈಂದೂರು, ಉದ್ಯಮಿ ಗುರುರಾಜ ಗಂಟಿಹೊಳೆ ಅತಿಥಿಗಳಾಗಿದ್ದರು.

ಸುರಭಿ ಗೌರವಾಧ್ಯಕ್ಷ ಯು. ಚಂದ್ರಶೇಖರ ಹೊಳ್ಳ, ಯಕ್ಷಗಾನ ನಿರ್ದೇಶಕ ದಾರಿಮಕ್ಕಿ ಪ್ರಶಾಂತ ಮಯ್ಯ, ಸುರಭಿ ನಿರ್ದೇಶಕ ಕೃಷ್ಣಮೂರ್ತಿ ಉಡುಪ ವೇದಿಕೆಯಲ್ಲಿದ್ದರು.ನಿರ್ದೇಶಕರಾದ ಸುಧಾಕರ ಪಿ.ಬೈಂದೂರು, ಗಣಪತಿ ಹೋಬಳಿದಾರ್, ಸುಮಾ ಉಪ್ಪುಂದ, ಯಶೋಧಾ ವಿವಿಧ ಹೊಣೆ ನಿರ್ವಹಿಸಿದರು. ಡಾ.ವೈ.ಚಂದ್ರಶೇಖರ ಶೆಟ್ಟಿ ಮತ್ತು ಪ್ರಶಾಂತ ಮಯ್ಯ ಅವರನ್ನು ಸನ್ಮಾನಿಸಲಾಯಿತು. ವಿವೇಕ ಚಿತ್ರೋತ್ಸವ ಮತ್ತು ಬಾಲಕಿಯರ ಯಕ್ಷಗಾನ ಪ್ರದರ್ಶಿಸಲ್ಪಟ್ಟವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.