ADVERTISEMENT

ಯುವಜನಾಂಗದಿಂದ ಬಲಿಷ್ಠ ರಾಷ್ಟ್ರ ಸಾಧ್ಯ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 8:35 IST
Last Updated 23 ಜನವರಿ 2012, 8:35 IST

ಸುಬ್ರಹ್ಮಣ್ಯ: `ಯುವಜನತೆ ಸಮಾಜಮುಖಿ ವಾತಾವರಣಕ್ಕೆ ಪೂರಕವಾದ ಬದುಕನ್ನು ರೂಪಿಸಿಕೊಳ್ಳಬೇಕು. ಯುವಜನಾಂಗ ಸಾಮಾ ಜಿಕ ಹಿತಚಿಂತನೆಯ ಅನನ್ಯ ಸೇವೆಯಲ್ಲಿ ತೊಡಗಿಕೊಂಡು, ಸ್ವಾರ್ಥರಹಿತವಾದ ಸೇವೆ ಯನ್ನು ಮೈಗೂಡಿಸಿಕೊಂಡಲ್ಲಿ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಹಿರಿಯರು- ಕಿರಿಯರಿಗೆ ತಿಳಿಸಿ ಹೇಳುವುದು ಅತ್ಯವಶ್ಯಕ~ ಎಂದು ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಸ.ಹಿ.ಪ್ರಾ. ಶಾಲಾ ವಠಾರದ ಶಿವಶಕ್ತಿ ವೇದಿಕೆಯಲ್ಲಿ ಶನಿವಾರ ನಡೆದ ಹರಿಹರಪಲ್ಲತ್ತಡ್ಕ ಶಿವಶಕ್ತಿ ಗೆಳೆಯರ ಬಳಗದ ದಶಮಾನೋತ್ಸವ ಸಂಭ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ದಶಸಂಭ್ರಮವನ್ನು ಶಾಸಕ ಎಸ್.ಅಂಗಾರ ಉದ್ಘಾಟಿಸಿದರು. ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಶಿವದ್ವಜ್ ವಿಶೇಷ ಅತಿಥಿಯಾಗಿದ್ದು, ಆಕರ್ಷಣೆ ಯಾಗಿದ್ದರು.

ಗೆಳೆಯರ ಬಳಗದ ಅಧ್ಯಕ್ಷ ಲವ ಮಲ್ಲಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾ.ಪಂ. ಅಧ್ಯಕ್ಷ ಮುಳಿಯ ಕೇಶವ ಭಟ್, ಜಿ.ಪಂ.ಸದಸ್ಯ ದೇವರಾಜ್ ಕೆ.ಎಸ್., ಶೈಲೇಶ್ ಅಂಬೆಕಲ್ಲು, ತಾ.ಪಂ. ಸದಸ್ಯೆ ತಾರಾ ಮಲ್ಲಾರ, ಗ್ರಾ.ಪಂ.ಅಧ್ಯಕ್ಷೆ ಬಿಂದು, ಹಮೀದ್ ಇಡ್ನೂರ್, ದೇವರಾಜ್ ಮುತ್ಲಾಜೆ , ಹಿಮ್ಮತ್ ಕೆ.ಸಿ. ದುರ್ಗಾದಾಸ್ ಮಲ್ಲಾರ ಅತಿಥಿಗಳಾಗಿ ದ್ದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಪೂರ್ವಾಧ್ಯಕ್ಷರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಹರಿಶ್ಚಂದ್ರ ಕುಕ್ಕುಂದ್ರಡ್ಕ ಸಂಪಾದಕತ್ವದ ಶಿವದ್ವನಿ ಸಂಚಿಕೆಯನ್ನು ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪಿ.ಎಸ್.ಗಂಗಾಧರ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.