ADVERTISEMENT

ವಿಟ್ಲದಲ್ಲಿ ಕಾಂಗ್ರೆಸ್ ಮೌನ ಪ್ರತಿಭಟನೆ

ಜಮ್ಮು ಕಾಶ್ಮೀರದ ಕಠುವಾ ಬಾಲಕಿಯ ಅತ್ಯಾಚಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 10:14 IST
Last Updated 18 ಏಪ್ರಿಲ್ 2018, 10:14 IST

ವಿಟ್ಲ: ಜಮ್ಮು ಕಾಶ್ಮೀರದ ಕಠುವಾ  ಬಾಲಕಿಯ ಅತ್ಯಾಚಾರ ಮತ್ತು ಕೊಲೆ, ಉತ್ತರ ಪ್ರದೇಶದ ಉನ್ನಾವ್ ಅತ್ಯಾಚಾರ ಸೇರಿದಂತೆ ಎಲ್ಲಾ ಅತ್ಯಾಚಾರ ಪ್ರಕರಣದ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಹಾಗೂ ಅವರ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಒತ್ತಾಯಿಸಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳವಾರ ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ಮೌನ ಪ್ರತಿಭಟನೆ ನಡೆಸಿದರು.

‘ಬಾಲಕಿಯೇ ಮತ್ತೊಮ್ಮೆ ಹುಟ್ಟಿ ಬಾ, ಮೋದಿ ಇದುವೇನಾ ನಿಮ್ಮ ಅಚ್ಚೆ ದಿನ್, ಬಿಜೆಪಿಯನ್ನು ನಾವು ದಿಕ್ಕರಿಸುತ್ತೇವೆ, ಹೆಣ್ಣು ಮಕ್ಕಳನ್ನು ರಕ್ಷಿಸಿರಿ, ಅತ್ಯಾಚಾರಿ ಬಿಜೆಪಿಯನ್ನು ಕಿತ್ತೆಸೆಯಿರಿ, ಅತ್ಯಾಚಾ ರಿಗಳನ್ನು ಗಲ್ಲಿಗೇರಿಸಿ ಮೊದಲಾದ ಘೋಷಣೆಗಳುಲ್ಲ ನಾಮಫಲಕವನ್ನು ಹಿಡಿದುಕೊಂಡ ಕಾಂಗ್ರೆಸ್ ಮುಖಂಡರು ರಸ್ತೆ ಬದಿಯಲ್ಲಿ ಕುಳಿತು ಮೌನ ಪ್ರತಿಭಟನೆ ನಡೆಸಿದರು.

ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಕಾಂಗ್ರೆಸ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಪ್ರಚಾರ ಸಮಿತಿ ಅಧ್ಯಕ್ಷ ರಮಾನಾಥ ವಿಟ್ಲ, ಕಿಶನ್ ಘಟಕದ ಅಧ್ಯಕ್ಷ ಉಮಾನಾಥ್ ಶೆಟ್ಟಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ಮಠಂತಬೆಟ್ಟು, ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ರಮೇಶ್, ವಿಶ್ವನಾಥ ರೈ, ರಾಜೇಶ್ ಕುಮಾರ್ ಬಾಳೆಕಲ್ಲು, ಕರೀಂ ಕುದ್ದುಪದವು, ವಿಜಯ ಹಿರೇಬಂಡಾಡಿ, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿಕೆಎಂ ಅಶ್ರಫ್, ಬಾಬು ಅಗರಿ, ರಾಲ್ಫ್ ಡಿಸೋಜ ಪೆರುವಾಯಿ, ಅಶೋಕ್ ಕುಮಾರ್ ಶೆಟ್ಟಿ, ಎಂ.ಕೆ ಮೂಸಾ, ಶಮೀರ್ ಪಳಿಕೆ, ಹಸೈನಾರ್ ನೆಲ್ಲಿಗುಡ್ಡೆ, ಹರಿಪ್ರಸಾದ್ ಶೆಟ್ಟಿ, ಆದಂ, ಝಕಾರಿಯ ಹಿರೇ ಬಂಡಾಡಿ, ದಮಾಯಂತಿ, ಆರೀಫ್ ಮೇಗಿನಪೇಟೆ  ಇದ್ದರು.

ADVERTISEMENT

ಮೋಂಬತ್ತಿ ಬೆಳಗಿಸಿ ಪ್ರತಿಭಟನೆ

ಉಪ್ಪಿನಂಗಡಿ:  ಕಾಶ್ಮೀರದ ಕಠುವಾ ಮತ್ತು ಉತ್ತರ ಪ್ರದೇಶದ ಉನ್ನಾವುನಲ್ಲಿ ಮುಗ್ಧ ಬಾಲಕಿಯ ಮೇಲೆ ನಡೆದ ಪೈಶಾಚಿಕ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಭಾನುವಾರ ಆತೂರುನಲ್ಲಿ ನಾಗರಿಕ ಸಮಿತಿ ವತಿಯಿಂದ ಮೋಂಬತ್ತಿ ಬೆಳಗಿಸಿ ಪ್ರತಿಭಟನಾ ಸಭೆ ನಡೆಯಿತು.

ನಾಗರಿಕ ಸಮಿತಿಯ ಹುಸೈನ್ ಸಿರಾಜ್ ಮಾತನಾಡಿ ನಮ್ಮ ಕದವನ್ನು ತಟ್ಟುವ ಮುನ್ನ ನಾವೆಲ್ಲರೂ ಅವರನ್ನು ತಡೆಯಬೇಕು ಎಂದರು. ವಕೀಲ ಖಲಂದರ್ ಮಾತನಾಡಿ ಸಂಘ ಪರಿವಾರವು ಕೇವಲ ಮುಸಲ್ಮಾನರು, ದಲಿತರ, ಆದಿವಾಸಿಗಳ ಮತ್ತು ಇತರ ಹಿಂದುಳಿದ ಸಮುದಾಯವನ್ನು ನಾಶಗೊಳಿಸಿ ಮನು ಸಿದ್ದಾಂತವನ್ನು ಹೇರಲು ಪ್ರಯತ್ನಿಸುತ್ತಿದೆ.’ ಎಂದರು. ಮೂಸಾ ಮುಸ್ಲಿಯಾರ್ ಪ್ರಾರ್ಥಿಸಿದರು. ಅಬ್ದುಲ್ ರಝಾಕ್ ದಾರಿಮಿ  ಇದ್ದರು. ಬಿ.ಎಸ್. ಖಾದರ್ ಸ್ವಾಗತಿಸಿದರು

ಬಂಟ್ವಾಳ: ‘ಜಮ್ಮು ಕಾಶ್ಮೀರದ ಕಠುವಾಪ್ರಕರಣದ ಅತ್ಯಾಚಾರಿಗಳಿಗೆ ಸಾರ್ವಜನಿಕ ಗಲ್ಲು ಶಿಕ್ಷೆ ನೀಡುವ ಮೂಲಕ ಮೃತ ಬಾಲಕಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ’ಎಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಆಗ್ರಹಿಸಿದರು.

ಬಿ.ಸಿ.ರೋಡಿನಲ್ಲಿ ಪಿಎಫ್ಐ ಸಂಘಟನೆ ವತಿಯಿಂದ ಸೋಮವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ರಾಜ್ಯ  ಘಟಕದ ಪ್ರಧಾನ ಕಾರ್ಯದರ್ಶಿ ಜಾಫರ್ ಫೈಝಿ ಮಾತನಾಡಿ, ಹಿಂದು ಸಂಸ್ಕೃತಿ ರಕ್ಷಕರು  ಆ ಧರ್ಮದ ಧಾರ್ಮಿಕ ಕೇಂದ್ರವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಟೀಕಿಸಿದರು. ಬಂಟ್ವಾಳ ಪಿಎಫ್ಐ ವಲಯಾಧ್ಯಕ್ಷ ಇಜಾಝ್ ಅಹ್ಮದ್ ಮಾತನಾಡಿ, ಸಂಘ ಪರಿವಾರ ದೇಶದೆಲ್ಲೆಡೆ ಅತ್ಯಾಚಾರ ಮತ್ತು ಗುಂಪು ಹತ್ಯೆ ನಡೆಸುತ್ತಿದೆ ಎಂದರು.

ತಹಶೀಲ್ದಾರ್ ವೈ.ರವಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಎಸ್ಡಿಪಿಐ ಬಂಟ್ವಾಳ ಕ್ಷೇತ್ರಾಧ್ಯಕ್ಷ ಶಾಹುಲ್ ಎಸ್.ಎಚ್., ಸಲೀಂ ಕುಂಪನಮಜಲು, ಸಿದ್ದೀಕ್  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.