ADVERTISEMENT

ವಿವೇಕ ಸಂಸ್ಮರಣ ಇಂದು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 9:36 IST
Last Updated 16 ಸೆಪ್ಟೆಂಬರ್ 2013, 9:36 IST

ಮಂಗಳೂರು: ನಗರದ ರಾಮಕೃಷ್ಣ ಮಠದ ವತಿಯಿಂದ ಸ್ವಾಮಿ ವಿವೇಕಾನಂದರ 150ನೇ ಜನ್ಮಸಂವತ್ಸರದ ಪ್ರಯುಕ್ತ ‘ವಿವೇಕ ಸಂಸ್ಮರಣ’ ಕಾರ್ಯಕ್ರಮ ಇಂದಿನಿಂದ 21ರ ವರೆಗೆ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ನಡೆಯಲಿದೆ. ಬೆಳಿಗ್ಗೆ 9.30 ರಿಂದ ಸಂಜೆ 4ರ ವರೆಗೆ ಆರು ದಿನಗಳ ಕಾಲ ಗೋಷ್ಠಿಗಳು ನಡೆಯಲಿದೆ.

16ರಿಂದ ಕ್ರಮವಾಗಿ ಸ್ನಾತಕೋತ್ತರ, ಪದವಿ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ, ಶಾಲಾ ಶಿಕ್ಷಕರು ಹಾಗೂ ಕಾಲೇಜಿನ ಉಪನ್ಯಾಸಕರಿಗೆ ಮೌಲ್ಯವರ್ಧಿತ ಕಾರ್ಯಕ್ರಮಗಳು ನಡೆಯಲಿದೆ. ಉದ್ಘಾಟಕರಾಗಿ ಸಚಿವರಾದ ಎಚ್.ಕೆ. ಪಾಟೀಲ್‌, ವಿನಯ ಕುಮಾರ್‌ ಸೊರಕೆ, ಅಭಯಚಂದ್ರ ಜೈನ್, ಯು.ಟಿ.ಖಾದರ್, ರಮಾನಾಥ ರೈ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ಆಗಮಿಸಲಿದ್ದಾರೆ.

ಸುಶೀಲಚಂದ್ರ. ಎಂ., ರಾಘವೇಂದ್ರ ರಾವ್ .ಎ., ಕವಿತಾ. ಬಿ.ಟಿ., ಡಾ. ಎಚ್. ಶಾಂತಾರಾಮ್, ಗಣೇಶ ಕಾರ್ಣಿಕ್‌, ಡಾ. ಎನ್. ವಿನಯ ಹೆಗ್ಡೆ ಮುಖ್ಯ ಅತಿಥಿಯಾಗಿರುವರು. ಆತ್ಮಶ್ರದ್ಧಾನಂದಜಿ, ನಿರ್ಭಯನಂದ ಸರಸ್ವತಿ, ವೀರೇಶಾನಂದ ಸರಸ್ವತಿ, ವಿವೇಕಮಯಿ, ಪ್ರೊ. ರಘೋತ್ತಮರಾವ್, ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಚಕ್ರವರ್ತಿ ಸೂಲಿಬೆಲೆ, ಸುರೇಶ ಕುಲಕರ್ಣಿ, ಡಾ. ಬಿ.ಎಮ್.ಹೆಗ್ಡೆ ಇವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.