ADVERTISEMENT

ಶಿಕ್ಷಣ ಬದುಕಿಗೆ ಬುನಾದಿ: ಶಾಸಕ

ಮಂಜೊಟ್ಟಿ: ಶಾಲಾ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 12:14 IST
Last Updated 22 ಮಾರ್ಚ್ 2018, 12:14 IST

ಉಜಿರೆ: ‘ಪ್ರಾಥಮಿಕ ಶಿಕ್ಷಣ ಮುಂದಿನ ಜೀವನಕ್ಕೆ ಭದ್ರ ಬುನಾದಿಯಾಗಿದೆ’ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು.

ಅವರು ಬುಧವಾರ ಮಂಜೊಟ್ಟಿ ಯಲ್ಲಿ ಆಂಗ್ಲ ಮಾಧ್ಯಮ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಾಥಮಿಕ ಶಾಲಾ ಹಂತದಲ್ಲಿಯೇ ಇಲ್ಲಿ ಕಂಪ್ಯೂಟರ್ ಶಿಕ್ಷಣಕ್ಕೆ ಅವಕಾಶ ನೀಡಿರುವುದು ಶ್ಲಾಘನೀಯವಾಗಿದೆ’ ಎಂದು ಹೇಳಿ ಶುಭ ಹಾರೈಸಿದರು.

ADVERTISEMENT

ಖ್ಯಾತ ವಿದ್ವಾಂಸ ಎಂ.ಎಸ್.ಎಂ. ಅಬ್ದುಲ್ ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಕಕ್ಕಿಂಜೆ ಮಾತನಾಡಿ ಕೋಮು ಸಾಮರಸ್ಯ ಹಾಗೂ ಪರಧರ್ಮ ಸಹಿಷ್ಣುತೆಯ ಪಾಠ ಪ್ರಾಥಮಿಕ ಶಾಲೆ ಯಿಂದಲೇ ಪ್ರಾರಂಭವಾಗಬೇಕು. ಶಾಲೆಗಳು ದೇಶದ ಉಜ್ವಲ ಭವಿಷ್ಯವನ್ನು ರೂಪಿಸುತ್ತವೆ. ಶಾಲೆಗಳಲ್ಲಿ ನೀತಿ ಪಾಠದ ಮೂಲಕ ಮಕ್ಕಳ ಮನಸ್ಸು ಪರಿವರ್ತನೆಯಾಗಬೇಕು ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಜಿಲ್ಲಾ ಪಂಚಾ ಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾಹುಲ್ ಹಮೀದ್ ಕೆ.ಕೆ. ಮಾತನಾಡಿ ಸರ್ವಧರ್ಮೀಯರು ಜ್ಞಾನ ದೇಗುಲವಾದ ಶಾಲೆ ಯನ್ನು ಗೌರವಿಸುತ್ತಾರೆ. ಪರಿಸರದ ವಿದ್ಯಾರ್ಥಿ ಗಳು ಈ ಶಾಲೆಯ ಸದುಪಯೋಗ ಪಡೆಯಲೆಂದು ಆಶಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸೌಮ್ಯ ಲತಾ ಜಯಂತ ಗೌಡ, ನೋಟರಿ ಶಶಿಕಿರಣ್ ಜೈನ್, ಖಾಸಿಂ ಮಲ್ಲಿಗೆ
ಮನೆ, ಯಾಕೂಬ್ ಶುಭಾಶಂಸನೆ ಮಾಡಿದರು.

ಅಶ್ರಫ್ ಅಲಿ ಕುಂಞಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುನಿರಾಜ ಅಜ್ರಿ ಸ್ವಾಗತಿಸಿದರು. ಹಬೀಬ್ ಸಾಹೇಬ್ ಧನ್ಯವಾದಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.