ADVERTISEMENT

ಸಂಘ ಸಂಸ್ಥೆಗಳಿಂದ ಗ್ರಾಮೀಣ ಜಾಗೃತಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 9:35 IST
Last Updated 4 ಮಾರ್ಚ್ 2012, 9:35 IST

ಸಾಲಿಗ್ರಾಮ(ಬ್ರಹ್ಮಾವರ): `ಸಂಘ ಸಂಸ್ಥೆಗಳ ಮೂಲಕ ಗ್ರಾಮೀಣ ಭಾಗದಲ್ಲಿ ಅನೇಕ ಜನಪರ ಕಾರ್ಯಕ್ರಮಗಳು ಆಗುತ್ತಿರುವುದರಿಂದ ಗ್ರಾಮೀಣ ಜನತೆಯಲ್ಲಿ ಜಾಗೃತಿ ಮೂಡಿದೆ~ ಎಂದು ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳೀ ಕಡೇಕಾರ್ ಹೇಳಿದರು.

ಸಾಲಿಗ್ರಾಮ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಇತ್ತೀಚೆಗೆ ನಡೆದ ಕಾರ್ಕಡ ಗೆಳೆಯರ ಬಳಗದ 24ನೇ ವಾರ್ಷಿಕೋತ್ಸವ, ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ದತ್ತಿನಿಧಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಕಲೆ ಸಂಸ್ಕೃ ಬಿಂಬಿಸುವ, ಆರೋಗ್ಯದ ಮಾಹಿತಿಯನ್ನು ನೀಡಿ ಜನರ ಬಗ್ಗೆ ಕಾಳಜಿ ಇರುವಂತಹ ಸಂಘ ಸಂಸ್ಥೆಗಳಿಂದ ಗ್ರಾಮೀಣ ಭಾಗದಲ್ಲಿ ಇಂದು ಅಭಿವೃದ್ಧಿ ಕಾಣುತ್ತಿದ್ದೇವೆ. ಕನ್ನಡ ನಾಡು ನುಡಿ ಭಾಷೆಯ ಬಗ್ಗೆ ಚಿಕ್ಕ ಮಕ್ಕಳಲ್ಲಿ ಅಭಿಮಾನ ಮೂಡಿಸಬೇಕು~ ಎಂದರು. ಹಿರಿಯ ಯಕ್ಷಗಾನ ಕಲಾವಿದ ಮಣೂರು ಪಡುಕೆರೆಯ ಮಳವಳ್ಳಿ ಹೆರಿಯ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಅಂಧ ಪ್ರತಿಭಾವಂತ ವಿದ್ಯಾರ್ಥಿ ಅನಿಲ್ ಎನ್.ಕೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗಾಗಿ ಎನ್.ಪ್ರಗತಿ, ವಿಜ್ಞಾನ ವಿದ್ಯಾರ್ಥಿ ಕೆ.ಕಾರ್ತಿಕ್ ಅವರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ.ರಾಜು ಪೂಜಾರಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಡುಪಿಯ ಉದ್ಯಮಿ ಸುರೇಶ್ ಹೆಗ್ಡೆ ಬಹುಮಾನ ವಿತರಿಸಿದರು.

ಬಳಗದ ಸ್ಥಾಪಕ ಹಾಗೂ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಕರ್ನಾಟಕ ಬ್ಯಾಂಕ್‌ನ  ಬಿ.ಎಂ.ರಮೇಶ್, ಸಾಸ್ತಾನದ ಹೇಮಂತ್, ನಿವೃತ್ತ ಅಧ್ಯಾಪಕರಾದ ಜಿ.ಶಂಕರನಾರಾಯಣ ಹೇರ್ಳೆ ಗಿಳಿಯಾರು, ಯಜ್ಞನಾರಾಯಣ ಹೇರ್ಳೆ, ಶಾಲೆಯ ಮುಖ್ಯ ಶಿಕ್ಷಕ ಪ್ರಭಾಕರ ಕಾಮತ್, ಬಳಗದ ಕಾರ್ಯದರ್ಶಿ ಕೆ.ಶಿವರಾಮ, ಉಪಾಧ್ಯಕ್ಷ ಕೆ.ಶಶಿಧರ ಮಯ್ಯ, ಜೊತೆ ಕಾರ್ಯದರ್ಶಿ ಕೆ.ಚಂದ್ರ ಆಚಾರ್, ಕೆ.ಮಹಾಬಲೇಶ್ವರ ಆಚಾರ್, ಕೆ.ಕಾಳಿಂಗ ಹೊಳ್ಳ, ಕೆ.ಶ್ರೀಪತಿ ಆಚಾರ್, ಕೆ.ತಮ್ಮಯ್ಯ, ಕೆ.ನಾಗರಾಜ ಉಪಾಧ್ಯ, ಕೆ.ಉಮೇಶ ಆಚಾರ್, ರಘು ಭ0ಡಾರಿ, ಕೆ.ಉದಯ ಐತಾಳ್, ಜಗದೀಶ ಆಚಾರ್, ಕೆ.ರಾಘವೇಂದ್ರ,  ಕೃಷ್ಣಮೂರ್ತಿ ಹೇರ್ಳೆ, ಜಿ.ರತ್ನಾಕರಯ್ಯ ಗುಂಡ್ಮಿ, ಕೆ.ಶಂಕರ, ಕೆ.ಮಾಧವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.