ಕೆರೆಕಾಡು (ಮೂಲ್ಕಿ); ಇಲ್ಲಿನ ಮೂಲ್ಕಿ ಠಾಣಾ ವ್ಯಾಪ್ತಿಯ ಕೆರೆಕಾಡು ಎಂಬಲ್ಲಿ ಸೋಮವಾರ ನಿರ್ಜನ ಪ್ರದೇಶದಲ್ಲಿ ಮಾನವ ತಲೆ ಬುರುಡೆ ಪತ್ತೆಯಾಗಿದ್ದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಕೆರೆಕಾಡು ಬೆಳ್ಳಾಯರುವಿನ ಅರಸುಕೆರೆಯ ಬಳಿಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾದ ಇದು ಸ್ಥಳೀಯರಲ್ಲಿ ಕುತೂಹಲ ಹುಟ್ಟಿಸಿದೆ. ಮೂಲ್ಕಿ ಪೊಲೀಸರು ತನಿಖೆ ನಡೆಸಿ ಇದರ ದೇಹದ ಭಾಗಕ್ಕಾಗಿ ಸ್ಥಳೀಯರೊಂದಿಗೆ ಸುತ್ತಮುತ್ತ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ.
ಈ ಪ್ರದೇಶದ ಸುಮಾರು ಎರಡು ಕಿಮೀ ದೂರದಲ್ಲಿ ಸಾರ್ವಜನಿಕ ರುದ್ರಭೂಮಿಯಿದ್ದು ಅಲ್ಲಿಂದ ಅಲೆಮಾರಿ ನಾಯಿಗಳು ಇಲ್ಲಿಗೆ ತಂದು ಹಾಕಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಅಥವಾ ಇಲ್ಲಿ ಭಾರಿ ಭೂ ವ್ಯವಹಾರ ನಡೆಯುತ್ತಿದ್ದು ಈ ಬುರುಡೆ ಹಾಕಿದ ಜಮೀನು ಮಾರಾಟವಾಗಬಾರದು ಎಂಬ ದುರದ್ದೇಶದಿಂದಲೂ ಇಂಥ ಪ್ರಯತ್ನ ನಡೆಸಿರಬಹುದು ಎಂದು ಪೊಲೀಸರು ಸಂಶಯ ಪಟ್ಟಿದ್ದಾರೆ.
ಈ ಬುರುಡೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬಂದ ನಂತರ ಎಲ್ಲಾ ಸಂಶಯಗಳಿಗೆ ನಿವಾರಣೆ ಆಗಬಹುದು ಎಂದು ಮೂಲ್ಕಿ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.