ADVERTISEMENT

ಸಮಾಜ ಅಭಿವೃದ್ಧಿಗೆ ಶಿಕ್ಷಣ ಕ್ರಾಂತಿ ಆಗಲಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 11:05 IST
Last Updated 9 ಫೆಬ್ರುವರಿ 2011, 11:05 IST

ಕುಂದಾಪುರ: ಸಮಾಜದ ಅಭಿವೃದ್ಧಿಗೆ ಪ್ರತಿಯೊಂದು ಸಮಾಜದಲ್ಲಿಯೂ ಶಿಕ್ಷಣ ಕ್ರಾಂತಿಯಾಗಬೇಕು. ಭವಿಷ್ಯದ ಮಕ್ಕಳಿಗಾಗಿ ಧನ-ಕನಕ ಸಂಪಾದಿಸಿಡಬೇಕು ಎನ್ನುವ ಉದ್ದೇಶಕ್ಕಿಂತ ಅವರಿಗೆ ಯೋಗ್ಯವಾದ  ಶಿಕ್ಷಣ ಸಂಪತ್ತು ನೀಡಬೇಕು ಎನ್ನುವ ಆದರ್ಶವನ್ನು ಪ್ರತಿಯೊಬ್ಬ ತಂದೆ ತಾಯಿ ಕಾಣಬೇಕು. ಸಂಘಟನೆಗಳು ಕೇವಲ ಪುರುಷರಿಗೆ ಮಾತ್ರ ಸೀಮಿತವಲ್ಲ ಎನ್ನುವ ಆರೋಗ್ಯಕರ ಬೆಳವಣಿಗೆ ಹೆಚ್ಚಾಗುತ್ತಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಅಭಿವೃದ್ಧಿಯ ಸಂಕೇತ ಎಂದು ಮುಂಬೈ ದೇವಾಡಿಗರ ಸಂಘದ  ಅಧ್ಯಕ್ಷ ಎಚ್.ಮೋಹನದಾಸ್ ಹೇಳಿದರು.

ಭಾನುವಾರ ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಕುಂದಾಪುರದ ದೇವಾಡಿಗ ಸಮಾಜ ಸೇವಾ ಸಂಘ ಆಶ್ರಯದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಂಘದ 5ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.ಕುಂದಾಪುರ ದೇವಾಡಿಗರ ಸಂಘದ ಅಧ್ಯಕ್ಷ ದಿನೇಶ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ದತ್ತಾತ್ರೇಯ ದೇವಾಡಿಗ, ಮುಂಬೈ ಉದ್ಯಮಿ ಸುರೇಶ್ ಡಿ. ಪಡುಕೋಣೆ, ಮುಂಬೈ ದೇವಾಡಿಗರ ಸಂಘದ ಮಾಜಿ ಅಧ್ಯಕ್ಷ ದಿನೇಶ್ ದೇವಾಡಿಗ ಕದ್ರಿ, ರಾಜ್ಯ ದೇವಾಡಿಗರ ಸಂಘದ ಉಪಾಧ್ಯಕ್ಷ ವಾಮನ ಮರೋಳಿ, ತಾ.ಪಂ ಮಾಜಿ ಅಧ್ಯಕ್ಷ ರಾಜು ದೇವಾಡಿಗ, ಮಹಿಳಾ ಸಂಘಟನೆ ಅಧ್ಯಕ್ಷೆ ಗೌರಿ ದೇವಾಡಿಗ ಇದ್ದರು.

ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ತಾ.ಪಂ ಸದಸ್ಯೆ ಶಾರದಾ ದೇವಾಡಿಗ, ಹಂಗ್ಳೂರು ಗ್ರಾ.ಪಂ ಉಪಾಧ್ಯಕ್ಷ ಸಂತೋಷ್ ದೇವಾಡಿಗ, ಗ್ರಾ.ಪಂ ಸದಸ್ಯ ಸುಧಾಕರ ದೇವಾಡಿಗ, ಹಿರಿಯ ವಾದ್ಯ ಕಲಾವಿದ ರಾಮ ದೇವಾಡಿಗ, ರತ್ನಾ ಕೃಷ್ಣ ದೇವಾಡಿಗ (ಅಣ್ಣಿಯಕ್ಕ), ನಯನಾ ದೇವಾಡಿಗ ಹಾಗೂ ಸತೀಶ್ ದೇವಾಡಿಗ ಕಟ್ಟು ಅವರನ್ನು ಸನ್ಮಾನಿಸಲಾಯಿತು.
ನಾರಾಯಣ ದೇವಾಡಿಗ, ನಾಗರಾಜ್ ರಾಯಪ್ಪನ್‌ಮಠ, ಅಂಬಿಕಾ, ಸಂಜೀವ ದೇವಾಡಿಗ, ಕರುಣಾಕರ ಬಳ್ಕೂರು, ಉದಯ್ ಡಿ, ಉದಯ್ ದೇವಾಡಿಗ ಹೇರಿಕೇರಿ, ಗಿರಿಜಾ ಬಾಬುರಾವ್, ಗೌರಿ ಶಿವಾನಂದ, ಆಶಾ ಮಂಜುನಾಥ, ಗಂಗೂ ಸುರೇಶ್ ದೇವಾಡಿಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.