ADVERTISEMENT

ಸಮುದ್ರಪಾಲಾದ ಶಾರದಾ ಕಟ್ಟೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2013, 9:36 IST
Last Updated 24 ಜುಲೈ 2013, 9:36 IST
ಸಮುದ್ರಪಾಲಾದ ಶಾರದಾ ಕಟ್ಟೆ
ಸಮುದ್ರಪಾಲಾದ ಶಾರದಾ ಕಟ್ಟೆ   

ಉಳ್ಳಾಲ: ಇಲ್ಲಿನ ಮೊಗವೀರಪಟ್ನದಲ್ಲಿ ಸಮುದ್ರದ ಅಲೆಗಳ ಅಬ್ಬರ ಮಂಗಳವಾರ ಹೆಚ್ಚಾಗಿದ್ದು, ಇದರಿಂದ ಒಂದು ಮನೆ ಅಪಾಯದ ಅಂಚಿನಲ್ಲಿದೆ. 15 ವರ್ಷಗಳಿಂದ ಇದ್ದಂತಹ ಶಾರದಾ ಕಟ್ಟೆ ಸಮುದ್ರ ಪಾಲಾಗಿದೆ.

ಕೈಕೋ, ಸುಭಾಷನಗರ, ಕಿಲೇರಿಯಾನಗರ, ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತದಿಂದ ಹಾನಿಯಾಗುತ್ತಿತ್ತು. ಇದೀಗ ಮೊಗವೀರಪಟ್ನದಲ್ಲೂ ಸಮುದ್ರ ಕೊರೆತ ಹೆಚ್ಚಾಗಿ ಯಾದವ ಕರ್ಕೇರ ಎಂಬವರ ಮನೆಗೆ ಭಾಗಶ: ಹಾನಿಯಾಗಿದೆ.

15ಕ್ಕೂ ಹೆಚ್ಚು ಮನೆಗಳು ಅಪಾಯದ ಅಂಚಿನಲ್ಲಿವೆ. ಕಡಲಿನ ಅಬ್ಬರ ದಿನೇ ದಿನೇ ಹೆಚ್ಚಾಗುತ್ತಿದ್ದರೂ ಜನಪ್ರತಿನಿಧಿಗಳು ಪ್ರದೇಶಕ್ಕೆ ಭೇಟಿ  ನೀಡಿಲ್ಲ. ಪರಿಹಾರ ಕಾರ್ಯವನ್ನು ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯ ಈಜುಗಾರರ ಸಂಘದ ಸದಸ್ಯರು ಆರೋಪಿಸಿದ್ದಾರೆ.

ಬೆಲೆಬಾಳುವ ಸಾಮಗ್ರಿಗೆ ಹುಡುಕಾಟ: ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿರುವುದರಿಂದ ಸ್ಥಳೀಯ ಯುವಕರು ಸಮುದ್ರ ತೀರದಲ್ಲಿ ಬೆಲೆಬಾಳುವ ಸ್ವತ್ತುಗಳು ಬರುವ ನಂಬಿಕೆಯಿಂದ ಸಮುದ್ರದ ಅಬ್ಬರವನ್ನು ಲೆಕ್ಕಿಸದೆ ಹುಡುಕಾಟ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT