ADVERTISEMENT

ಸಹ್ಯಾದ್ರಿಯಲ್ಲಿ ಓಜೋನ್‌ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2018, 15:55 IST
Last Updated 20 ಸೆಪ್ಟೆಂಬರ್ 2018, 15:55 IST
ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓಝೋನ್‌ ದಿನಾಚರಣೆಯನ್ನು ಎ.ಜಿ. ಪೈ ಉದ್ಘಾಟಿಸಿದರು. – ಪ್ರಜಾವಾಣಿ ಚಿತ್ರ 
ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓಝೋನ್‌ ದಿನಾಚರಣೆಯನ್ನು ಎ.ಜಿ. ಪೈ ಉದ್ಘಾಟಿಸಿದರು. – ಪ್ರಜಾವಾಣಿ ಚಿತ್ರ    

ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ಸಿವಿಲ್ ಎಂಜಿನಿಯರಿಂಗ್ ಇಲಾಖೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ‘ವಿಶ್ವ ಓಝೋನ್ ದಿನ’ ಆಚರಿಸಲಾಯಿತು.

ಮಂಗಳೂರಿನ ಜೆಬಿಎಫ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ನಲ್ಲಿ ನಿರ್ದೇಶಕ ಮತ್ತು ಸಿಇಒ ಮುಖ್ಯ ಅತಿಥಿ ಎ. ಜಿ. ಪೈ ಅವರು ಉದ್ಘಾಟಿಸಿದರು.‘ ಓಝೋನ್ ಪದರ ಸವಕಳಿ ಮತ್ತು ಮಾಂಟ್ರಿಯಲ್ ಪ್ರೊಟೊಕಾಲ್‌ನ ಪ್ರಾಮುಖ್ಯತೆಯ ಹಿಂದಿರುವ ರಸಾಯನಶಾಸ್ತ್ರ ಮತ್ತು ಮೂಲಗಳನ್ನು ಅರಿಬೇಕು. ಓಝೋನ್ ಪದರವನ್ನು ರಕ್ಷಿಸುವ ಬಗ್ಗೆ ಜಾಗತಿಕವಾಗಿಗಮನ ಕೇಂದ್ರೀಕರಿಸುವುದು ಅಗತ್ಯ’ ಎಂದರು.

ಸಹ್ಯಾದ್ರಿ ಕಾಲೇಜ್ ಡೀನ್ ಆರ್‌ ಅಂಡ್‌ ಡಿ ಡಾ. ಎಸ್. ಮಂಜಪ್ಪ , ಹಿರಿಯ ಪರಿಸರ ಅಧಿಕಾರಿ ರಾಜಶೇಖರ್‌ ಪುರಾಣಿಕ್‌, ಸಹ್ಯಾದಿ ಕಾಲೇಜು ಪ್ರಾಂಶುಪಾಲರಾದ ಡಾ.ಆರ್.ಶ್ರೀನಿವಾಸ್ ರಾವ್ ಕುಂಟೆ , ಡಾ. ಗಣೇಶ್ ಡಿಬಿ ಮಾತನಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.