ಮಂಗಳೂರು: ಸಾಬೂನು ಹಾಗೂ ಚಾಕೊಲೇಟ್ ಸಿರಪ್ ಒಳಗೆ ಅಡಿಗಿಸಿ ವಿದೇಶದಿಂದ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪಿಯನ್ನು ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬುಧವಾರ ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು ಆತನಿಂದ 800.600 ಗ್ರಾಂ ತೂಕದ ಚಿನ್ನ ತುಂಡುಗಳನ್ನು ಹಾಗೂ ಹರಳುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಜೇಶ್ವರದ ಮೇಲಂಗಡಿ ಮನೆಯ ನಿವಾಸಿ ಅಬ್ದುಲ್ ಗಫೂರ್ (30) ಬಂಧಿತ ಆರೋಪಿ. ದುಬೈನಿಂದ ವಿಮಾನದಲ್ಲಿ ಬಂದಿಳಿದ ಆರೋಪಿಯು ಲಕ್ಸ್ ಬ್ರಾಂಡಿನ ಸಾಬೂನಿನಲ್ಲಿ ‘ಅಮೆರಿಕನ್ ಗಾರ್ಡನ್’ ಚಾಕಲೇಟ್ ಸಿರಪ್‌ನಲ್ಲಿ ಚಿನ್ನದ ತುಂಡುಗಳನ್ನು ಹಾಗೂ ಹರಳುಗಳನ್ನು ಅಡಗಿಸಿ ಕಳ್ಳಸಾಗಣೆ ಮಾಡಿದ್ದ. ವಶಪಡಿಸಿಕೊಂಡ ಚಿನ್ನದ ಮೌಲ್ಯ ₨ 24,09,806 ಎಂದು ಅಂದಾಜಿಸಲಾಗಿದೆ.
ಕಸ್ಟಮ್ಸ್ ಸಹಾಯಕ ಆಯುಕ್ತ ಕೃಷ್ಣಕುಮಾರ್ ಪ್ರಸಾದ್, ಅಧೀಕ್ಷಕರಾದ ಬಿ.ಪ್ರಭಾಕರ ಪೂಜಾರಿ, ಲಯೊನೆಲ್ ಫರ್ನಾಂಡಿಸ್, ಸೇಂದಿಲ್ ಮುರುಗನ್, ಬಿ.ಎ.ಕೃಷ್ಣಪ್ಪ, ಎಚ್.ಜಿ.ಯೋಗೇಶ್, ನಿರೀಕ್ಷಕರಾದ ಜಿ.ಕುಮಾರಸ್ವಾಮಿ, ಪ್ರೀತಿ ಸುಮಾ, ಎಸ್.ರಾಜನ್ ಬೆಹೆರ ಹಾಗೂ ಅಂಕಿತ್ ಕುಮಾರ್ ಸಿಬ್ಬಂದಿ ಗುಲಾಬಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.