ADVERTISEMENT

ಹಸಿದವರಿಗೆ ಹಲಸು ಕಲ್ಪವೃಕ್ಷ: ಸಚಿವ ರೈ

ಬಿ.ಸಿ.ರೋಡ್: ಛಾಯಾಗ್ರಾಹಕರ ಸಂಘದಿಂದ ‘ಹಲಸಿನ ಹಬ್ಬ’

​ಪ್ರಜಾವಾಣಿ ವಾರ್ತೆ
Published 15 ಜೂನ್ 2015, 6:05 IST
Last Updated 15 ಜೂನ್ 2015, 6:05 IST
ಬಂಟ್ವಾಳ ತಾಲ್ಲೂಕಿನ ಛಾಯಾಗ್ರಾಹಕರ ಸಂಘದ ವತಿಯಿಂದ ಬಿ.ಸಿ.ರೋಡ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ‘ಹಲಸಿನ ಹಬ್ಬ’ ಕಾರ್ಯಕ್ರಮದಲ್ಲಿ ವಿಟ್ಲದ ದಿನೇಶ್ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಬಂಟ್ವಾಳ ತಾಲ್ಲೂಕಿನ ಛಾಯಾಗ್ರಾಹಕರ ಸಂಘದ ವತಿಯಿಂದ ಬಿ.ಸಿ.ರೋಡ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ‘ಹಲಸಿನ ಹಬ್ಬ’ ಕಾರ್ಯಕ್ರಮದಲ್ಲಿ ವಿಟ್ಲದ ದಿನೇಶ್ ನಾಯಕ್ ಅವರನ್ನು ಸನ್ಮಾನಿಸಲಾಯಿತು.   

ಬಂಟ್ವಾಳ: ಕೃಷಿಕರ ಹಣ್ಣಿನ ಬೆಳೆಯಲ್ಲಿ ಹಲಸು ಎಂಬುದು ಹಸಿದ ಹೊಟ್ಟೆಗೆ ಆರೋಗ್ಯಪೂರ್ಣ ಆಹಾರ ನೀಡುವ ಕಲ್ಪವೃಕ್ಷವಾಗಿ ಮೂಡಿ ಬರುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಬಂಟ್ವಾಳ ತಾಲ್ಲೂಕಿನ ಛಾಯಾ ಗ್ರಾಹಕರ ಸಂಘದ ವತಿಯಿಂದ ಜಿಲ್ಲಾ ಸಂಘದ ಬೆಳ್ಳಿಹಬ್ಬ ಪ್ರಯುಕ್ತ ಬಿ.ಸಿ. ರೋಡ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ‘ಹಲಸಿನ ಹಬ್ಬ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಹಲಸಿನಿಂದ ಹಲವು ಖಾದ್ಯಗಳನ್ನು ತಯಾರಿಸುವುದು ಸೇರಿದಂತೆ ಹಲಸಿನ ಬೆಳೆ ಸಂರಕ್ಷಣೆ ಮತ್ತು ಮೌಲ್ಯವರ್ಧನೆ ಅಗತ್ಯವಿದೆ. ಇದೀಗ ಛಾಯಾಗ್ರಾಹಕರ ಸಂಘವು ಈ ನಿಟ್ಟಿನಲ್ಲಿ ಶ್ರಮಿಸುತ್ತಿ ರುವುದು ಸ್ತುತ್ಯರ್ಹ ಎಂದು  ಹೇಳಿದರು. ಜಿಲ್ಲಾ ಸಂಘದ ಅಧ್ಯಕ್ಷ ವಾಸುದೇವ ರಾವ್ ಮಾತನಾಡಿ, ಬಂಟ್ವಾಳ ಛಾಯಾ ಗ್ರಾಹಕರ ಸಂಘವು ಸಕ್ರಿಯ ಚಟುವಟಿಕೆ ಮತ್ತು ವಿನೂತನ ಕಾರ್ಯಕ್ರಮ ಮೂಲಕ ಜನರಿಗೆ ಹತ್ತಿರವಾಗುತ್ತಿದೆ ಎಂದರು. 

ಜಿಲ್ಲಾ ಪಂಚಾಯಿತಿ  ಉಪಾಧ್ಯಕ್ಷ ಸತೀಶ್ ಕುಂಪಲ, ಬಂಟ್ವಾಳ ಪುರ ಸಭಾಧ್ಯಕ್ಷೆ ವಸಂತಿ ಚಂದಪ್ಪ, ತೋಟ ಗಾರಿಕಾ ಸಹಾಯಕ ನಿರ್ದೇಶಕ ಪಿ. ಸಂಜೀವ ನಾಯ್ಕ, ಬುಡಾ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್, ನಿವೃತ್ತ ವಲಯ ಅರಣ್ಯಾಧಿಕಾರಿ, ಹಲಸು ಬೆಳೆಗಾರ ಗ್ಯಾಬ್ರಿಯಲ್ ವೇಗಸ್, ಪುರಸಭಾ ಸದಸ್ಯ ಸದಾಶಿವ ಬಂಗೇರ, ಪತ್ರಕರ್ತರಾದ ಮೌನೇಶ್ ವಿಶ್ವಕರ್ಮ, ವಿಶ್ವನಾಥ ಬಂಟ್ವಾಳ್,

ವಕೀಲರ ಸಂಘದ ಅಧ್ಯಕ್ಷ ಎಂ. ಚಂದ್ರಶೇಖರ ಪೂಜಾರಿ, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಎನ್. ಪ್ರಕಾಶ ಕಾರಂತ, ಬಂಟ್ವಾಳ ಜೇಸಿ ಕ್ಲಬ್ ಅಧ್ಯಕ್ಷ ಲೋಕೇಶ್ ಸುವರ್ಣ ಮತ್ತಿತರರು ಶುಭ ಹಾರೈಸಿದರು. ಸಂಘದ ಗೌರವಾಧ್ಯಕ್ಷ ದಯಾನಂದ ಬಿ. ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಾನಂದ ಬಾಳಿಗಾ, ಸಂಘದ ಕೋಶಾ ಧಿಕಾರಿ ಜಯಂತ ಸಿದ್ಧಕಟ್ಟೆ ಇದ್ದರು.

ವಿಟ್ಲದ ‘ಸಸ್ಯಶ್ಯಾಮಲ’ ದಿನೇಶ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಬಿಲ್ವಪತ್ರೆ ಮತ್ತಿತರ ಔಷಧೀಯ ಸಸಿ ವಿತರಿಸಲಾಯಿತು. ಸಂಘದ ಅಧ್ಯಕ್ಷ ಆನಂದ ಎನ್. ಸ್ವಾಗತಿಸಿ, ಕಾರ್ಯದರ್ಶಿ ರಾಜೇಂದ್ರ ಕೆ. ವಂದಿಸಿದರು. ಎಚ್ಕೆ ನಯನಾಡು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.