ADVERTISEMENT

‘ಕ್ರೀಡಾಪಟುಗಳಿಗೆ ಉದ್ಯೋಗ ಮೀಸಲಾತಿ ಸಾಲದು’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 8:38 IST
Last Updated 17 ಸೆಪ್ಟೆಂಬರ್ 2013, 8:38 IST

ಮೂಡಬಿದಿರೆ: ನಿರಂತರ ಕ್ರೀಡೆಯಲ್ಲಿ ತೊಡಗಿಸಿ­ಕೊಂಡರೆ ದೈಹಿಕ ಕ್ಷಮತೆ, ಮಾನಸಿಕ ಸಮ­ತೋಲನವನ್ನು ಕಾಯ್ದಕೊಳ್ಳಬಹುದು. ಭಾರತ­ದಲ್ಲಿ ಕ್ರಿಕೆಟ್‌ ಹೊರತುಪಡಿಸಿ ಉಳಿದ ಕ್ರೀಡೆಗಳಿಗೆ ಪ್ರೋತ್ಸಾಹ ಸಿಗದೆ ಅವು ಜನ­ಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ. ಸಾಧನೆ ಮಾಡಿ­ದ ಕ್ರೀಡಾಪಟುಗಳಿಗೆ ಸರ್ಕಾರ ನೀಡುವ ಮೀಸಲಾತಿ ಏನೇನೂ ಸಾಲದು ಎಂದು ಜಿಲ್ಲಾ ಪಂಚಾಯತಿ ಸದಸ್ಯ ಈಶ್ವರ್‌ ಕಟೀಲು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಸಾರ್ವ­ಜನಿಕ ಶಿಕ್ಷಣ ಇಲಾಖೆ ಮಂಗಳೂರು ಹಾಗೂ ರೋಟರಿ ಆಂಗ್ಲಮಾಧ್ಯಮ ಆಲೆ ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯ­ದಲ್ಲಿ ರೋಟರಿ ಶಾಲೆಯಲ್ಲಿ ಸೋಮವಾರ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದ ವಾಲಿಬಾಲ್‌ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತ­ನಾಡಿದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಶಾಲೆಯ ಕಾರ್ಯದರ್ಶಿ  ನಾರಾಯಣ ಪಿಎಂ, ಮಕ್ಕಳು ಉತ್ತಮ ಸಾಧನೆ ತೋರಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯಲಿ ಎಂದು ಹಾರೈಸಿದರು.

ಅಂತರಾಷ್ಟ್ರೀಯ ವಾಲಿಬಾಲ್‌ ಆಟಗಾರ ಪಿ.ಎ ಜೋಸೆಫ್‌, ಉತ್ತಮ ಜಿಲ್ಲಾ ಶಿಕ್ಷಕಿ ಪ್ರಶಸ್ತಿ ವಿಜೇತ ಪ್ರಾಂತ್ಯ ಪ್ರೌಢಶಾಲೆಯ ಮುಖ್ಯೋ­ಪಾಧ್ಯಾಯಿನಿ ರಾಜಶ್ರೀ ಅವರನ್ನು  ಸನ್ಮಾನಿಸ­ಲಾಯಿತು. ತಾಲ್ಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ನಾಗೇಶ್‌, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೇಶವ, ಧೀರಜ್‌, ದೈಹಿಕ ಶಿಕ್ಷಕ ಪ್ರಕಾಶ್‌ ಹೆಗ್ಡೆ ಮತ್ತಿತರರು ಇದ್ದರು.

ರೋಟರಿ ಪ್ರಾಂಶುಪಾಲ ವಿನ್ಸೆಂಟ್‌ ಡಿಕೋಸ್ತಾ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ಉಡುಪಿ ನಿರೂಪಿಸಿದರು. ಗಜಾನನ ಉಪಾ­ಧ್ಯಾಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.