ADVERTISEMENT

‘ಗಾಂಧೀಜಿ ಯುವಪೀಳಿಗೆಗೆ ಆದರ್ಶ’

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2013, 8:30 IST
Last Updated 28 ಸೆಪ್ಟೆಂಬರ್ 2013, 8:30 IST
ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ಶುಕ್ರವಾರ ನಡೆದ ದಿವಂಗತ ಎಸ್.ಡಿ ಸಾಮ್ರಾಜ್ಯ ಸ್ಮಾರಕ ಅಂತರ್ ಕಾಲೇಜು ಭಾಷಣ ಸ್ಪರ್ಧೆಯನ್ನು ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಉದ್ಘಾಟಿಸಿದರು.
ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ಶುಕ್ರವಾರ ನಡೆದ ದಿವಂಗತ ಎಸ್.ಡಿ ಸಾಮ್ರಾಜ್ಯ ಸ್ಮಾರಕ ಅಂತರ್ ಕಾಲೇಜು ಭಾಷಣ ಸ್ಪರ್ಧೆಯನ್ನು ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಉದ್ಘಾಟಿಸಿದರು.   

ಮೂಡುಬಿದಿರೆ: ಗಾಂಧೀಜಿಯವರ ವಿಚಾರಧಾರೆ, ಜೀವನಕ್ರಮ ಯುವ ಪೀಳಿಗೆಗೆ ಆದರ್ಶ ಎಂದು ದ.ಕ. ಜಿಲ್ಲಾ ಕೃಷಿಕ ಸಮಾಜ ಸಂಘದ ಅಧ್ಯಕ್ಷ ಸಂಪತ್ ಕುಮಾರ್ ಸಾಮ್ರಾಜ್ಯ ಹೇಳಿದರು.

ಮಹಾವೀರ ಕಾಲೇಜು ವತಿಯಿಂದ ಶುಕ್ರವಾರ ಕಾಲೇಜು ಸಭಾಂಗಣದಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ದಿವಂಗತ ಎಸ್.ಡಿ ಸಾಮ್ರಾಜ್ಯ ಸ್ಮಾರಕ `ಅಂತರ್ ಕಾಲೇಜು ಭಾಷಣ ಸ್ಪರ್ಧೆ -ಗಾಂಧಿ ವಿಚಾರಧಾರೆ’ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿ ಅಗರ್ಭ ಶ್ರೀಮಂತರಾಗಿದ್ದರೂ ಅಸ್ಪ್ರಶ್ಯತೆ, ವರ್ಣಭೇದ, ಬಡತನದ ವಿರುದ್ಧ ಹೋರಾಟ ನಡೆಸಿ ಯಶಸ್ಸು ಸಾಧಿಸಿದ್ದಾರೆ. ಸ್ವರಾಜ್ಯ ಕಲ್ಪನೆ ಮೂಲಕ ದೇಶಿ ಉತ್ಪನ್ನಗಳಿಗೆ ಸ್ವದೇಶದಲ್ಲಿ ಮಾರುಕಟ್ಟೆಯ ಕನಸು ಕಂಡಿದ್ದರು. ಸ್ವಾತಂತ್ರ್ಯಕ್ಕಾಗಿ ದುಡಿದ ಹಿರಿಯರನ್ನು ನಾವಿಂದು ಮರೆಯುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಚಾರ್ಯ ಪೊ್ರೊ.ಚಂದ್ರಶೇಖರ್ ದೀಕ್ಷಿತ್ ಯುವ ಪೀಳಿಗೆಯಲ್ಲಿ ಸಂಸ್ಕೃತಿ ಶ್ರೇಷ್ಠ ಎಂಬ ಭಾವನೆ ಮೂಡಿದೆ. ದೇಶಕ್ಕಾಗಿ ತ್ಯಾಗ ಮಾಡಿದ ಗಾಂಧೀಜಿಯಂಥ ಶ್ರೇಷ್ಠ ವ್ಯಕ್ತಿಗಳನ್ನು ಸ್ಮರಿಸಲು ಚರ್ಚಾ ಸ್ಪರ್ಧೆ, ವಿಚಾಋ ಸಂಕಿರಣಗಳು ಅವಶ್ಯ ಎಂದರು.

ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಗೋವಿಂದಪ್ಪ, ಮಾನವಿಕ ಸಂಘದ ಸಂಯೋಜಕಿ ಎಚ್.ಎಸ್ ಜಯಶ್ರೀ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಮಧೂರ ಮೋಹನ್ ಕಲ್ಲೂರಾಯ, ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ಅಧ್ಯಕ್ಷ ಶಬರೀಶ್ ಶೆಟ್ಟಿ ಮತ್ತಿತರರು ಇದ್ದರು.

ಮಮತ ಸ್ವಾಗತಿಸಿದರು. ಸುಲೋಚನ ನಿರೂಪಿಸಿದರು. ನಾಗಶ್ರೀ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.