ADVERTISEMENT

₹ 5 ಲಕ್ಷ ವಂಚನೆ– ದೂರು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 5:12 IST
Last Updated 30 ಮಾರ್ಚ್ 2023, 5:12 IST

ಮಂಗಳೂರು: ಅರೆಕಾಲಿಕ ಕೆಲಸ ಕೊಡಿಸುವ ಹಾಗೂ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವ ಕುರಿತು ವಾಟ್ಸ್ಆ್ಯಪ್‌ ಸಂದೇಶ ಕಳುಹಿಸಿ ₹ 5.02 ಲಕ್ಷ ವಂಚಿಸಿದ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಅಪರಿಚಿತ ವ್ಯಕ್ತಿಯು ವಾಟ್ಸ್ಆ್ಯಪ್‌ ಮೂಲಕ ಸಂದೇಶ ಕಳುಹಿಸಿ ಅರೆಕಾಲಿಕ ಕೆಲಸ ಕೊಡಿಸುವ ಭರವಸೆ ನೀಡಿದ್ದರು. ನಂತರ ಟೆಲಿಗ್ರಾಂ ಆ್ಯಪ್‌ನ ಗ್ರೂಪ್‌ಗೆ ಸೇರಿಸಿ ಹೂಡಿಕೆ ಮಾಡಿದ ಹಣವನ್ನು ದ್ವಿಗುಣ ಮಾಡುವ ಬಗ್ಗೆ ಸಂದೇಶ ಕಳುಹಿಸಿದ್ದರು. 2023ರ ಮಾರ್ಚ್‌ 27 ಮತ್ತು 28ರಂದು ಹಂತ ಹಂತವಾಗಿ ಒಟ್ಟು ₹ 5.02 ಲಕ್ಷ ಹಣವನ್ನು ನನ್ನಿಂದ ಪಾವತಿಸಿಕೊಂಡು ಲಾಭಾಂಶವನ್ನೂ ನೀಡದೇ, ಹೂಡಿಕೆ ಮಾಡಿದ ಮೊತ್ತವನ್ನೂ ಮರಳಿಸದೇ ವಂಚಿಸಿದ್ದಾರೆ’ ಎಂದು ವಂಚನೆಗೆ ಒಳಗಾದ ವ್ಯಕ್ತಿಯೊಬ್ಬರು ಸೆನ್‌ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT