ಬೆಳ್ತಂಗಡಿ: ‘ತುಳುನಾಡಿನ ವೈಶಿಷ್ಟತೆಯ ಅನಾವರಣ ಆಟಿಯಲ್ಲೊಂದು ದಿನ. ಸಂಗಾತಿ ಮಹಾ ಸಂಗಮ ಕಾರ್ಯಕ್ರಮ ಪ್ರಗತಿಪರ ಚಿಂತನೆಗೆ ಸಹಕಾರಿಯಾಗಬೇಕು. ಮಹಿಳಾ ಶೋಷಣೆಯನ್ನು ಸಮರ್ಥಿಸುವ ಕಾರ್ಯಕ್ರಮ ಆಗಬಾರದು’ ಎಂದು ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಪ್ರಕಾಶ್ ಹೇಳಿದರು.
ಸಂಗಾತಿ ಗುಂಪು ಯೋಜನೆಯ ನೇತೃತ್ವದಲ್ಲಿ ನಡೆದ ಆಟಿಯಲ್ಲೊಂದು ದಿನ ಸಂಗಾತಿ ಮಾಹಾ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಹು ಸಂಖ್ಯಾತ ಜನ ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಆದಾಯ, ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಸಂಪತ್ತು ಲೂಟಿ ಮಾಡುತ್ತಾ ಬಡವರು–ಶ್ರೀಮಂತರು ಎಂಬ ಅಸಮಾನತೆಯನ್ನು ಮತ್ತಷ್ಟು ಹೆಚ್ಚು ಮಾಡಲು ಹೊರಟಿದ್ದಾರೆ. ಇದನ್ನು ನಾವು ವಿರೋಧಿಸಬೇಕು. ದುಡಿಮೆಗೆ ತಕ್ಕ ಪಾಲು ಸಿಗುವ ವ್ಯವಸ್ಥೆಗಾಗಿ ನಾವೆಲ್ಲ ಒಂದಾಗಿ ಹೋರಾಟ ನಡೆಸಬೇಕು ಎಂದರು.
ಪತ್ರಕರ್ತ ನವೀನ್ ಸೂರಿಂಜೆ ಮಾತನಾಡಿ, ‘ಹಿಂದಿನ ಶೋಷಣೆಯುಕ್ತ ಸಮಾಜ ಮುಂದಿನ ಸಮಾನತೆಯ ಬದುಕಿಗೆ ಪ್ರೇರಣೆಯಾಗಬೇಕು. ಇತಿಹಾಸದ ಮೆಲುಕು ಅಪರಾಧವಲ್ಲ’ ಎಂದರು.
ಸಂಗಾತಿ ಗುಂಪು ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಎಂ.ಭಟ್, ಸಾಮರಸ್ಯ ವೇದಿಕೆಯ ಅಧ್ಯಕ್ಷೆ ಮಂಜುಳಾ ನಾಯಕ್, ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ ಗೌಡ ಮಾತನಾಡಿದರು.
ಹೆಚ್ಚುವರಿ ಸರ್ಕಾರಿ ವಕೀಲ ಮನೋಹರ ಕುಮಾರ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ನಾಗೇಶ್ ಕುಮಾರ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಕಿರಣಪ್ರಭಾ, ಮುಖಂಡರಾದ ಜಯರಾಮ ಮಯ್ಯ, ಸುಕುಮಾರ್, ಲೋಕೇಶ್ ಕುದ್ಯಾಡಿ, ಅಭಿಷೇಕ್, ಅಶ್ವಿತ, ಜಯಂತ, ಫಾರೂಕ್ ಮಡಂಜೋಡಿ, ಮೋಹನ್ ಕಲ್ಮಂಜ, ಧರ್ಮರಾಜ್ ಅರಸಿನಮಕ್ಕಿ, ವಿನುಶರಮಣ, ಮುಖಂಡ ಜಯಂತ, ವಿನೋದ, ಕುಮಾರಿ, ಉಷಾ, ಶ್ರೀಧರ, ನಜೀರ್ ಕಕ್ಕಿಂಜೆ, ದೀಪಾಶ್ರೀ, ಶಂಕರ, ಜಯಶ್ರೀ ಮುಗುಳಿ, ಹರ್ಷಿತಾ, ಅಕ್ಷತ, ಪ್ರೇಮ, ನಂದಿತ, ಗೀತ ಪಣೆಜಾಲು ಭಾಗವಹಿಸಿದ್ದರು.
ಸಂಗಾತಿ ಗುಂಪಿನ ಸದಸ್ಯರಿಗೆ ಲಾಭಾಂಶ ವಿತರಿಸಲಾಯಿತು.
ಡಿವೈಎಫ್‌ಐ ತಾಲ್ಲೂಕು ಘಟಕದ ಅಧ್ಯಕ್ಷೆ ಅಧಿತಿ ಸ್ವಾಗತಿಸಿದರು. ತಾಲ್ಲೂಕು ಬೀಡಿ ಕೆಲಸಗಾರರ ಸಂಘದ ಜಯಶ್ರೀ ವಂದಿಸಿದರು. ರೈತ ಮುಖಂಡರಾದ ಶ್ಯಾಮರಾಜ್, ದಲಿತ ಹಕ್ಕು ಸಮಿತಿಯ ಮುಖಂಡರಾದ ಈಶ್ವರಿ ಪದ್ಮುಂಜ, ಶಿಕ್ಷಕಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.