ವಿಟ್ಲ: ಮಂಗಳಪದವು ಎಂಬಲ್ಲಿ ನಿಂತಿದ್ದ ಬಾಕ್ಸೈಟ್ ಮಣ್ಣು ಸಾಗಾಟದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದ ಬೈಕ್ ಸವಾರ ಮೃತಪಟ್ವಿದ್ನು, ಸಹ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳಪದವು ಎಂಬಲ್ಲಿ ನಡೆದಿದೆ.
ವಿಟ್ಲ ಕಸಬಾ ಗ್ರಾಮದ ಇಸ್ಮಾಯಿಲ್ ಎಂಬುವರ ಪುತ್ರ ಮೊಹಮ್ಮದ್ ಇರ್ಫಾನ್ (19) ಮೃತಪಟ್ಟವರು. ಸಹ ಸವಾರ ಮಹಮ್ಮದ್ ಫಾರೀಸ್ ಗಂಭೀರ ಗಾಯಗೊಂಡಿದ್ದಾರೆ.
ಒಕ್ಕೆತ್ತೂರು ಮೂಲದ ಅವರು ಮಂಗಳಪದವು ಕಡೆಗೆ ಪೆಟ್ರೋಲ್ ತುಂಬಿಸಲು ತೆರಳುತ್ತಿದ್ದಾಗ ಅವಘಡ ನಡೆದಿದೆ.
ಕನ್ಯಾನ, ಕರೋಪಾಡಿ ಕಡೆಯಿಂದ ಪ್ರತಿನಿತ್ಯ ಬಾಕ್ಸೈಟ್ ಮಣ್ಣು ಸಾಗಾಟದ ಲಾರಿಗಳು ಸಂಚರಿಸುತ್ತವೆ. ಲಾರಿ ಚಾಲಕ ಬೇಜಾಬ್ದಾರಿತನದಿಂದ ಮಂಗಳಪದವು ಪೆಟ್ರೋಲ್ ಪಂಪ್ ಬಳಿ ರಸ್ತೆಯಲ್ಲೇ ಲಾರಿ ನಿಲ್ಲಿಸಿ ಚಹಾ ಕುಡಿಯಲು ಹೋಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.