ಮಂಗಳೂರು: ವಾಸ್ತುಶಿಲ್ಪವು ಕಲೆ, ವಿಜ್ಞಾನ, ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವ ವೃತ್ತಿಯಾಗಿದ್ದು ಸೃಜನಾತ್ಮಕ, ತಾಂತ್ರಿಕ ಜ್ಞಾನ ಹಾಗೂ ಕಾರ್ಯಕ್ಷಮತೆಯ ಮಿಶ್ರಣವಾಗಿದೆ ಎಂದು ಕೀಸ್ಟೋನ್ ಅರ್ಕಿಟೆಕ್ಚರ್‌ನ ದೀಪಿಕಾ ಎ.ನಾಯಕ್ ಹೇಳಿದರು.
ಕೊಡಿಯಾಲ್‌ಬೈಲ್‌ನ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ನಡೆಸಿದ ‘ವೃತ್ತಿಯಾಗಿ ವಾಸ್ತುಶಿಲ್ಪ’ ಕುರಿತ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂಕ್ ಆರ್ಟಿಸ್ಟ್ ಮತ್ತು ವಾಸ್ತುಶಿಲ್ಪಿ ಆರ್. ನಿಶಿತ್ ಉರ್ವಾಲ್ ಮಾತನಾಡಿ, ಕಲೆ ಮತ್ತು ವಿಜ್ಞಾನ ಎರಡರ ಸಂಯೋಜನೆಯಾಗಿರುವ ವಾಸ್ತುಶಿಲ್ಪ, ಅದರ ಪರಿಕಲ್ಪನೆ, ವಾಸ್ತುಶಿಲ್ಪ ಕ್ಷೇತ್ರ ಆಯ್ಕೆ ಮಾಡಲು ಬೇಕಾದ ವಿದ್ಯಾರ್ಹತೆ, ಪಠ್ಯಕ್ರಮ ಮತ್ತು ಇನ್ನಿತರ ಮಾಹಿತಿಗಳನ್ನು ವಿವರಿಸಿದರು.
ಎಕ್ಸ್‌ಪರ್ಟ್ ಕೋಚಿಂಗ್ ಕ್ಲಾಸ್‍ನ ಮುಖ್ಯಸ್ಥ ಕರುಣಾಕರ ಬಳ್ಕೂರು ಸಂಪನ್ಮೂಲ ವ್ಯಕ್ತಿಗಳನ್ನು ಗೌರವಿಸಿದರು. ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿ ಸ್ಕಂದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.