ADVERTISEMENT

ಪುತ್ತೂರು: ₹ 1ಲಕ್ಷ ಮೌಲ್ಯದ ಅಡಿಕೆ ಕಳವು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2023, 13:05 IST
Last Updated 27 ಆಗಸ್ಟ್ 2023, 13:05 IST
1ಲಕ್ಷ ಸಮೀಪಿಸಿದ ಅಡಿಕೆ ಧಾರಣೆ; ತೋಟಕ್ಕೆ ಸರದಿ ಕಾವಲು
1ಲಕ್ಷ ಸಮೀಪಿಸಿದ ಅಡಿಕೆ ಧಾರಣೆ; ತೋಟಕ್ಕೆ ಸರದಿ ಕಾವಲು   

ಪುತ್ತೂರು: ಮನೆಯೊಳಗೆ ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ₹1ಲಕ್ಷ ಮೌಲ್ಯದ ಅಡಿಕೆ ಮತ್ತು ₹10ಸಾವಿರ ನಗದು ಹಣ ಕಳವಾದ ಘಟನೆ ಪುತ್ತೂರು ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದಲ್ಲಿ ನಡೆದಿದೆ.

ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಸಮೀಪದ ನೆಕ್ಕರೆ ಡಿವೈನ್ ಮರ್ಸಿ ಮನೆಯ ಕಾರ್ಮಿನ್‌ ಮಿರಾಂದ ಅವರ ಮನೆಯಿಂದ ಅಡಿಕೆ ಕಳವಾಗಿದೆ. ಈ ಬಗ್ಗೆ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

‘ಪತಿ ಸುನಿಲ್ ಮಿರಾಂದ ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ತಾಯಿ ಅವರು ಅವರ ಮನೆಯಲ್ಲಿ ಅಡಿಕೆ ಒಣಗಿಸಲು ಜಾಗ ಇಲ್ಲದೆ ಇರುವುದರಿಂದ ನಮ್ಮ ಮನೆಯ ಅಂಗಳದಲ್ಲಿ ಅಡಿಕೆ ಒಣಗಿಸಿ, ಅಡಿಕೆಯನ್ನು ಸುಲಿದು ತೂಕ ಮಾಡಿ ಇಟ್ಟಿದ್ದರು. ಸುಲಿದ 276 ಕೆ.ಜಿ ಅಡಿಕೆಯನ್ನು 6 ಗೋಣಿಗಳಲ್ಲಿ ತುಂಬಿಸಿ ಮನೆಯ ಎದುರಿನ ಹಾಲ್‌ನಲ್ಲಿ ಇಡಲಾಗಿತ್ತು. ಈ ಅಡಿಕೆ ಮತ್ತು ಕೆಲಸಗಾರರಿಗೆ ನೀಡಲೆಂದು ಮನೆಯ ಬೆಡ್ ರೂಮಿನ ಕಪಾಟಿನಲ್ಲಿಟ್ಟಿದ್ದ ₹10 ಸಾವಿರ ಹಣ ಕಳವಾಗಿದೆ’ ಎಂದು ಕಾರ್ಮಿನ್‌ ಮಿರಾಂದ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಪುತ್ರಿಯ ಅನಾರೋಗ್ಯದಿಂದ ಆ.24ರಂದು ಸಂಜೆ ಮನೆಯ ಹಿಂದಿನ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿ, ಮುಂದಿನ ಬಾಗಿಲಿಗೆ ಬೀಗ ಹಾಕಿ ರೋಟರಿಪುರದಲ್ಲಿರುವ ತಾಯಿ ಮನೆಗೆ ಹೋಗಿದ್ದೆ. ಈ ನಡುವೆ ಕಳವು ಆಗಿದೆ ಎಂದು ತಿಳಿಸಿದ್ದಾರೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.