ADVERTISEMENT

‘ರಾಜ್ಯೋತ್ಸವ ಪ್ರಶಸ್ತಿ ಮೊತ್ತ ಸೇವಾ ಸಂಸ್ಥೆಗಳಿಗೆ ದೇಣಿಗೆ’

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 19:10 IST
Last Updated 4 ನವೆಂಬರ್ 2025, 19:10 IST
ಝಕರಿಯಾ ಜೋಕಟ್ಟೆ
ಝಕರಿಯಾ ಜೋಕಟ್ಟೆ   

ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ₹5 ಲಕ್ಷ ಮೊತ್ತವನ್ನು ಐದು ಮಾನವೀಯ ಸೇವಾ  ಸಂಸ್ಥೆಗಳಿಗೆ ನೀಡುವುದಾಗಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಉದ್ಯಮಿ ಝಕರಿಯಾ ಜೋಕಟ್ಟೆ ತಿಳಿಸಿದ್ದಾರೆ.

ಮಂಗಳೂರಿನ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆ, ಸ್ನೇಹದೀಪ ಎಚ್ಐವಿ ಪೀಡಿತ ಮಕ್ಕಳ ಆಶ್ರಮ, ಸ್ನೇಹಾಲಯ ವ್ಯಸನ ವಿಮೋಚನಾ ಕೇಂದ್ರ, ಎಂ.ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್, ಹಿದಾಯ ಕಾಲೊನಿಯ ಅಂಗವಿಕಲ ಮಕ್ಕಳ ಕೇಂದ್ರಕ್ಕೆ ತಲಾ ₹1 ಲಕ್ಷ ನೀಡಲಾಗುವುದು. ಅಭಿಮಾನಿ ಬಳಗ ಏರ್ಪಡಿಸಿರುವ ಪೌರಸನ್ಮಾನದ ವೇಳೆ ಈ ಮೊತ್ತ ವಿತರಿಸಲಾಗುವುದು ಎಂದು ಹೇಳಿದ್ದಾರೆ.

ನ.1ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.