ಬಜಪೆ: ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಡಿ.25ರಿಂದ 29 ರವರೆಗೆ ನಡೆಯಲಿದೆ. 24ರಂದು ತಾಂಗಡಿ ಬರ್ಕೆ ಕಾವರ ಮನೆಯಿಂದ ದೈವಗಳ ಭಂಡಾರ ಹೊರಟು ದೇರಿಂಜ ಗಿರಿಯಲ್ಲಿ ಧ್ವಜಾರೋಹಣ ನಡೆಯಲಿದೆ.
ಡಿ.25 ರಂದು ಬೆಳಿಗ್ಗೆ 10ಕ್ಕೆ ಉಳ್ಳಾಯ ದೈವದ ನೇಮೋತ್ಸವ, ರಾತ್ರಿ 9ರಿಂದ ಕೊಡಮಣಿತ್ತಾಯ ದೈವದ ನೇಮೋತ್ಸವ, 26ರಂದು ರಾತ್ರಿ 9 ರಿಂದ ಕಾಂತೇರಿ ಜುಮಾದಿ ನೇಮೋತ್ಸವ, 27ರಂದು ರಾತ್ರಿ 9ರಿಂದ ಜಾರಂದಾಯ ನೇಮೋತ್ಸವ, 28ರಂದು ರಾತ್ರಿ 9ರಿಂದ ಸರಳ ಜುಮಾದಿ ನೇಮೋತ್ಸವ, 29ರಂದು ರಾತ್ರಿ 9ರಿಂದ ಪಿಲಿ ಚಾಮುಂಡಿ ದೈವದ ನೇಮೋತ್ಸವ, 30ರಂದು ಬೆಳಿಗ್ಗೆ 10ಕ್ಕೆ ಧ್ವಜಾವರೋಹಣ ನಡೆಯಲಿದೆ. ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರತಿದಿನ ಮಧ್ಯಾಹ್ನ 1ರಿಂದ ರಾತ್ರಿ ವರೆಗೆ ಅನ್ನಸಂತರ್ಪಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.