ADVERTISEMENT

ಪುತ್ತೂರು: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 5:32 IST
Last Updated 28 ಡಿಸೆಂಬರ್ 2025, 5:32 IST
ಬಾಂಗ್ಲಾದಲ್ಲಿ ನಡೆದ ಹಿಂದೂ ಯುವಕರ ಅಮಾನುಷ ಹತ್ಯೆ, ದೌರ್ಜನ್ಯ ಖಂಡಿಸಿ ಪುತ್ತೂರು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ಶುಕ್ರವಾರ ಪುತ್ತೂರು ನಗರದ ದರ್ಬೆ ವೃತ್ತದ ಬಳಿ ಪ್ರತಿಭಟನೆ ನಡೆಯಿತು
ಬಾಂಗ್ಲಾದಲ್ಲಿ ನಡೆದ ಹಿಂದೂ ಯುವಕರ ಅಮಾನುಷ ಹತ್ಯೆ, ದೌರ್ಜನ್ಯ ಖಂಡಿಸಿ ಪುತ್ತೂರು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ಶುಕ್ರವಾರ ಪುತ್ತೂರು ನಗರದ ದರ್ಬೆ ವೃತ್ತದ ಬಳಿ ಪ್ರತಿಭಟನೆ ನಡೆಯಿತು   

ಪುತ್ತೂರು: ಬಾಂಗ್ಲಾದಲ್ಲಿ ನಡೆದ ಹಿಂದೂ ಯುವಕರ ಅಮಾನುಷ ಹತ್ಯೆ, ಹಲವು ವರ್ಷಗಳಿಂದ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಪುತ್ತೂರು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ಶುಕ್ರವಾರ ನಗರದ ದರ್ಬೆ ವೃತ್ತದ ಬಳಿ ಪ್ರತಿಭಟನೆ ನಡೆಯಿತು.

ಬಿಜೆಪಿ ಮುಖಂಡ ಸಂಜೀವ ಮಠಂದೂರು, ಬಜರಂಗದಳದ ನಿಕಟಪೂರ್ವ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ, ವಿಶ್ವ ಹಿಂದೂ ಪರಿಷತ್ ಮುಖಂಡ ಮೋಹನ್‌ದಾಸ್‌ ಕಣಿಯೂರು ಮಾತನಾಡಿ, ದೌರ್ಜನ್ಯವನ್ನು ಖಂಡಿಸಿದರು. 

ವಿಶ್ವಹಿಂದೂ ಪರಿಷತ್, ಜಜರಂಗದಳ, ಜಿಜೆಪಿ, ಸಂಘ ಪರಿವಾರ ಸಂಘಟನೆಗಳ ಮುಖಂಡರಾದ ದಾಮೋದರ ಪಾಟಾಳಿ, ಜಯಂತ ರೈ ಕಂಬಳದಡ್ಡ, ಶ್ರೀಧರ್ ತೆಂಕಿಲ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಜೀವಂಧರ್ ಜೈನ್, ವಿದ್ಯಾ ಆರ್.ಗೌರಿ, ವಿರೂಪಾಕ್ಷ ಭಟ್ ಮಚ್ಚಿಮಲೆ, ಸುಂದರ ಪೂಜಾರಿ ಬಡಾವು, ದಯಾನಂದ ಶೆಟ್ಟಿ ಉಜಿರುಮಾರು, ಸುನಿಲ್ ದಡ್ಡು, ವಿಶ್ವೇಶ್ವರ ಭಟ್ ಬಂಗಾರಡ್ಕ, ರಾಧಾಕೃಷ್ಣ ಬೊರ್ಕರ್, ರಾಜೇಶ್ ಬನ್ನೂರು, ಲೋಕೇಶ್ ಹೆಗ್ಡೆ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.