ADVERTISEMENT

ಬಂಗ್ಲೆಗುಡ್ಡೆ: ಸ್ಮಾರಕ ಭವನ ನಿರ್ಮಿಸಿ: ಮುಖ್ಯಮಂತ್ರಿಗೆ ಪ್ರಭಾಕರ ಶಿಶಿಲ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಮೇ 2022, 16:17 IST
Last Updated 11 ಮೇ 2022, 16:17 IST
ಬೆಳ್ಳಾರೆಯಲ್ಲಿ ಇರುವ ಬ್ರಿಟಿಷರ ಕಾಲದ ತಾಲ್ಲೂಕು ಕಚೇರಿ, ಖಜಾನೆ.
ಬೆಳ್ಳಾರೆಯಲ್ಲಿ ಇರುವ ಬ್ರಿಟಿಷರ ಕಾಲದ ತಾಲ್ಲೂಕು ಕಚೇರಿ, ಖಜಾನೆ.   

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸುಳ್ಯ ತಾಲ್ಲೂಕಿನ ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ 1837 ರ ಅಮರ ಸುಳ್ಯ ರೈತ ಹೋರಾಟಗಾರರಿಗೆ ಸ್ಮಾರಕ ಭವನ ನಿರ್ಮಾಣ ಆಗಬೇಕಿದೆ. ಈ ಕಾರ್ಯ ನನೆಗುದಿಗೆ ಬಿದ್ದಿದ್ದು, ಆದಷ್ಟು ಶೀಘ್ರ ಇದನ್ನು ಸರ್ಕಾರ ಪೂರೈಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿದೆ.

ಕಳೆದ ವರ್ಷ ಮಾರ್ಚ್‌ 27 ರಂದು ಬೆಳ್ಳಾರೆ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯ ಸ್ಮಾರಕ ನಿರ್ಮಾಣದ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ಸಚಿವ ಎಸ್‌. ಅಂಗಾರ ಘೋಷಣೆ ಮಾಡಿದ್ದರು. ಈ ಭವನದ ಸುತ್ತ ಸುಂದರ ಉದ್ಯಾನ ನಿರ್ಮಾಣ ಮಾಡುವುದಾಗಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರಕುಮಾರ್‌ ಭರವಸೆ ನೀಡಿದ್ದರು. 14 ತಿಂಗಳು ಕಳೆದರೂ ಸ್ಥಳ ವಶಕ್ಕೆ ಪಡೆಯವುದನ್ನು ಬಿಟ್ಟು ಬೇರೆ ಯಾವುದೇ ಪ್ರಗತಿ ಆಗಿಲ್ಲ ಎಂದು ವಿದ್ವಾಂಸ ಡಾ. ಪ್ರಭಾಕರ ಶಿಶಿಲ ಒತ್ತಾಯಿಸಿದ್ದಾರೆ.

ಮನವಿಯ ಪ್ರತಿಗಳನ್ನು ಸಚಿವರಾದ ಎಸ್‌. ಅಂಗಾರ, ಸುನಿಲ್‌ಕುಮಾರ್‌, ಸಂಸದ ನಳಿನ್‌ಕುಮಾರ್ ಕಟೀಲ್‌, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರಿಗೆ ಸೂಕ್ತ ದಾಖಲೆಗಳೊಂದಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.