ADVERTISEMENT

ಬಂಟ್ವಾಳ: ಪಿಎಸ್‌ಐ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 21:38 IST
Last Updated 20 ಜುಲೈ 2025, 21:38 IST
ಕೀರಪ್ಪ
ಕೀರಪ್ಪ   

ಬಂಟ್ವಾಳ: ಇಲ್ಲಿನ ಗ್ರಾಮಾಂತರ ಪೋಲೀಸ್ ಠಾಣೆ ಪಿಎಸ್‌ಐ, ಉತ್ತರ ಕನ್ನಡ ಜಿಲ್ಲೆ ನಿವಾಸಿ ಕೀರಪ್ಪ (54) ಅವರು ಬಾಡಿಗೆ ಮನೆಯಲ್ಲಿ ಭಾನುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿರಸಿ ಪೊಲೀಸ್ ಠಾಣೆಯಿಂದ 5 ತಿಂಗಳ ಹಿಂದೆ ಬಡ್ತಿ ಹೊಂದಿ ಇಲ್ಲಿಗೆ ವರ್ಗಾವಣೆಗೊಂಡಿದ್ದರು.

ಅವರ ಕುಟುಂಬ ಸದಸ್ಯರು ಊರಲ್ಲೇ ಇದ್ದು, ಕೀರಪ್ಪ ಅವರು ಬಂಟ್ವಾಳದ ಬಾಡಿಗೆ ಮನೆಯಲ್ಲಿದ್ದರು.

ADVERTISEMENT

ಭಾನುವಾರ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗದೆ, ಫೋನ್ ಕರೆಯನ್ನೂ ಸ್ವೀಕರಿಸದ ಕಾರಣ ಸಂಶಯಗೊಂಡ ಪೊಲೀಸರು ಹೋಗಿ ನೋಡಿದಾಗ ಕೋಣೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಅವರ ಶವ ಕಂಡು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.