
ಬಂಟ್ವಾಳ: ಇಲ್ಲಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಜಿನ ಚೈತ್ಯಾಲಯ ಶ್ರಾವಕರ ವತಿಯಿಂದ ಬಂಟ್ವಾಳ ಜೈನ್ ಮಿಲನ್ ಸಹಭಾಗಿತ್ವದಲ್ಲಿ ಅಂತಾಕ್ಷರಿ ಸ್ಪರ್ಧೆ ಈಚೆಗೆ ನಡೆಯಿತು.
ಜೈನ್ ಮಿಲನ್ ಪೂರ್ವಾಧ್ಯಕ್ಷ ವೃಷಭ ಕುಮಾರ ಇಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಮುಖರಾದ ಮಿತ್ರಸೇನ ಜೈನ್ ಅಳದಂಗಡಿ, ಚಂದನ ಬ್ರಿಜೇಶ್, ಸೀಮಾ ಸುದೀಪ್ ಕುಮಾರ್ ತೀರ್ಪುಗಾರರಾಗಿದ್ದರು.
ರಾಜೇಂದ್ರ ಜೈನ್ ಪೆರ್ಲ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಸುದರ್ಶನ್ ಜೈನ್, ಮಂಗಳೂರು ವಲಯ ಉಪಾಧ್ಯಕ್ಷ ಸುಭಾಶ್ಚಂದ್ರ ಜೈನ್, ಕಾರ್ಯದರ್ಶಿ ಪ್ರಮೋದ್ ಕುಮಾರ್ ವೇಣೂರು, ನಿರ್ದೇಶಕ ವೃಷಭರಾಜ ಇಂದ್ರ, ಪ್ರಭಾಕರ ಜೈನ್, ಹರ್ಷೇಂದ್ರ ಬಲ್ಲಾಳ್, ಭರತ್ ಕುಮಾರ್, ಜಯಕೀರ್ತಿ, ವಿನಯ ಕುಮಾರಿ ಸಿದ್ದಕಟ್ಟೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.