ಮುಡಿಪು: ‘ನಾವು ಸ್ವಚ್ಛ, ಸ್ವಸ್ಥ ಮನಸ್ಸಿನೊಂದಿಗೆ ಪರಿಸರವನ್ನೂ ಸ್ವಚ್ಛವಾಗಿಟ್ಟುಕೊಂಡು ಮುನ್ನಡೆಯಬೇಕು’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಹೇಳಿದರು.
ಬ್ಯಾರೀಸ್ ಗ್ರೂಪ್‌ನ ಬಿಐಟಿ ಮತ್ತು ಬೀಟ್ಸ್ ವತಿಯಿಂದ ವಿಶ್ವ ಹಸಿರು ಸಪ್ತಾಹದ ಅಂಗವಾಗಿ ಗ್ರೀನ್ ವಾಕಥಾನ್- 2021ಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮಹಮ್ಮದ್ ಬ್ಯಾರಿ ಮಾತನಾಡಿ, ಸ್ವಚ್ಛ ಹಾಗೂ ಹಸಿರು ಪರಿಸರ ಉತ್ತೇಜಿಸಲು ಜಾಗೃತಿ ಮೂಡಿಸಬೇಕಾಗಿದೆ. ಪುರಾತನ ಆರಾಧನಾಲಯ, ತಾಜ್ ಮಹಲ್ ಮೊದಲಾದ ಕಡೆಗಳಲ್ಲಿ ಹಸಿರು ಕಾಣುತ್ತದೆ. ಇದು ಪೂರ್ವಜರ ಹಸಿರು ಪ್ರಜ್ಞೆಯನ್ನು ತಿಳಿಸುತ್ತದೆ. ಮರಗಳನ್ನು ಕಡಿದು ಅಭಿವೃದ್ಧಿ ಸಾಧ್ಯವಿಲ್ಲ. ಸುಸ್ಥಿರ ಅಭಿವೃದ್ಧಿ ಯುವ ಜನರ ಆದ್ಯತೆ ಆಗಬೇಕು’ ಎಂದರು.
ಆರ್ಕಿಟೆಕ್ಚರ್ ಆಶೋಕ್ ಮೆಂಡೋನ್ಸಾ, ಬಿಐಟಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಅಝೀಜ್ ಮುಸ್ತಫಾ, ಐಜಿಬಿಸಿಯ ಮಂಗಳೂರು ವಿಭಾಗದ ಉಪಾಧ್ಯಕ್ಷ ವೆಂಕಟೇಶ್ ಪೈ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಜೆರಾಲ್ಡ್ ಸಂತೋಷ್ ಡಿಸೋಜ, ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಡಾ.ಅಬ್ದುಲ್ಲಾ ಗುಬ್ಬಿ, ಅಂಜುಮ್ ಖಾನ್, ವಸಂತ ಕುಮಾರ್, ಝಯೀರ್ ಅಹ್ಮದ್ ಇದ್ದರು. ಪ್ರಾಂಶುಪಾಲ ಮಂಜೂರ್ ಭಾಷಾ ಸ್ವಾಗತಿಸಿದರು. ಗ್ರೀನ್ ವಾಕಥಾನ್ ವಿಶ್ವವಿದ್ಯಾಲಯದಿಂದ ದೇರಳಕಟ್ಟೆವರೆಗೆ ನಡೆಯಿತು. ಇನೋಳಿಯ ಬ್ಯಾರೀಸ್‌ನಲ್ಲಿ ಸಮಾರೋಪ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.