ADVERTISEMENT

ವಿಮಾನದಲ್ಲಿ ತಾಂತ್ರಿಕ ದೋಷ: ಬೆಂಗಳೂರು ಯಾನ ರದ್ದು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 14:52 IST
Last Updated 17 ಸೆಪ್ಟೆಂಬರ್ 2022, 14:52 IST
   

ಮಂಗಳೂರು: ಇಲ್ಲಿಗೆ ಸಮೀಪದ ಬಜಪೆಯ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಬೆಂಗಳೂರಿಗೆ ತೆರಳಬೇಕಿದ್ದ ವಿಮಾನಯಾನವನ್ನು ಸ್ಪೈಸ್‌ ಜೆಟ್‌ ಸಂಸ್ಥೆಯು ಶನಿವಾರ ದಿಢೀರ್‌ ರದ್ದುಪಡಿಸಿದ್ದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸಿದರು.

ವಿಮಾನವು (ಎಸ್‌ಜಿ 3027) ಬೆಳಿಗ್ಗೆ 7.20ಕ್ಕೆ ಬಜಪೆಯಲ್ಲಿ ಇಳಿಯಬೇಕಿತ್ತು. ಇಲ್ಲಿನ ರನ್‌ವೇ ಸ್ಪಷ್ಟವಾಗಿ ಗೋಚರಿಸದ ಕಾರಣ ಅದನ್ನು ಮತ್ತೆ ಬೆಂಗಳೂರಿಗೆ ಕಳುಹಿಸಿಕೊಡಲಾಗಿತ್ತು. ವಿಮಾನವು ಬೆಳಿಗ್ಗೆ 10.30ಕ್ಕೆ ಬಂದಿಳಿಯಿತು. ಬೆಂಗಳೂರಿಗೆ ತೆರಳಬೇಕಾದ ಇಲ್ಲಿನ ಪ್ರಯಾಣಿಕರು ವಿಮಾನವನ್ನು ಏರಿದ್ದರು. ಬೆಳಿಗ್ಗೆ 11.30ಕ್ಕೆ ವಿಮಾನವು ಹಾರಾಟ ನಡೆಸಬೇಕಿತ್ತು. ಅಷ್ಟರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ವಿಮಾನದಿಂದ ಕೆಳಗಿಳಿಯುವಂತೆ ಪ್ರಯಾಣಿಕರಿಗೆ ಸೂಚಿಸಲಾಯಿತು. ಕೆಲವು ಪ್ರಯಾಣಿಕರು ಬೇರೆ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು ಎಂದು ಮೂಲಗಳು ತಿಳಿಸಿವೆ.

‘ವಿಮಾನದಲ್ಲಿ 27 ಪ್ರಯಾಣಿಕರು ಬೆಂಗಳೂರಿಗೆ ತೆರಳಬೇಕಿತ್ತು. ದುರಸ್ತಿಯ ಕಾರಣಕ್ಕಾಗಿ ವಿಮಾನಯಾನವನ್ನು ರದ್ದುಪಡಿಸಲಾಯಿತು‘ ಎಂದು ಸ್ಪೈಸ್‌ಜೆಟ್‌ ಸಂಸ್ಥೆಯ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.