ADVERTISEMENT

ಮಂಗಳೂರು: ನೃತ್ಯಗುರು ಕಮಲಾ ಭಟ್‌ಗೆ ಅಭಿನಂದನೆ 13ಕ್ಕೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 14:15 IST
Last Updated 9 ಆಗಸ್ಟ್ 2022, 14:15 IST

ಮಂಗಳೂರು: ನೃತ್ಯಗುರು ವಿದುಷಿ ಕಮಲಾ ಭಟ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಆ.13ರಂದು ಸಂಜೆ 4 ಗಂಟೆಯಿಂದ ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ 2020ರ ಸಾಲಿನಲ್ಲಿ ಕಮಲಾ ಭಟ್ ಅವರಿಗೆ ‘ಕರ್ನಾಟಕ ಕಲಾಶ್ರೀ’ ಬಿರುದು ನೀಡಿ ಪುರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಅವರ ಶಿಷ್ಯರು, ಪೋಷಕರು, ಅಭಿಮಾನಿಗಳು ಅಭಿನಂದಿಸಲು ನಿರ್ಧರಿಸಿದ್ದಾರೆ ಎಂದು ಗೌರವಾಭಿನಂದನಾ ಸಮಿತಿ ಸದಸ್ಯ ಶ್ರೀಧರ ಹೊಳ್ಳ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಸಂಜೆ 4 ಗಂಟೆಯಿಂದ ನಾಟ್ಯಾಲಯದ ಶಿಷ್ಯೆಯರಾದ ಕೊಟ್ಟಾರದ ವಿದುಷಿ ಪ್ರತಿಮಾ ಶ್ರೀಧರ್, ವಿದುಷಿ ಸೌಮ್ಯಾ ರಾವ್, ಬೆಂಗಳೂರಿನ ಪ್ರಮೋದಾ ಭಟ್ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ಕ್ಕೆ ನಡೆಯುವ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ವಹಿಸುವರು. ಕಟೀಲು ಕ್ಷೇತ್ರದ ಶ್ರೀಹರಿನಾರಾಯಣದಾಸ ಆಸ್ರಣ್ಣ ಆಶೀರ್ವಚನ ನೀಡುವರು. ನಾಟ್ಯಗುರು ಉಳ್ಳಾಲ ಮೋಹನ್‌ಕುಮಾರ್ ಶುಭಾಶಂಸನೆ ಮಾಡುವರು. ಉಪನ್ಯಾಸಕ ಡಾ. ವಾದಿರಾಜ ಕಲ್ಲೂರಾಯ ಅಭಿನಂದನಾ ಭಾಷಣ ಮಾಡುವರು. ಗೌರವ ಅಭ್ಯಾಗತರಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಶಾರದಾ ವಿದ್ಯಾಸಂಸ್ಥೆ ಅಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ, ಎಸ್‍ಡಿಎಂ ಎಂಬಿಎ ಮಾಜಿ ನಿರ್ದೇಶಕ ಡಾ. ದೇವರಾಜ್ ಕೆ., ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್‌ ಕುಮಾರ್ ಕಲ್ಕೂರ, ‘ನಮ್ಮ ಕುಡ್ಲ’ದ ಲೀಲಾಕ್ಷ ಕರ್ಕೇರ ಭಾಗವಹಿಸುವರು ಎಂದರು.

ADVERTISEMENT

ಗೌರವಾಭಿನಂದನಾ ಸಮಿತಿ ಪ್ರಮುಖರಾದ ಪ್ರಸನ್ನ ಕೆ., ಮಾಧವ ಜೋಗಿತ್ತಾಯ, ವಿದುಷಿ ಶೈಲಜಾ ಶ್ರೀಕಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.