ADVERTISEMENT

ಪುಸ್ತಕ ಸಗಟು ಖರೀದಿ ಸರ್ಕಾರದ ಜವಾಬ್ದಾರಿ: ಪ್ರೊ.ವಿವೇಕ ರೈ ಅಭಿಮತ

'ಸಪ್ನ' ದಿಂದ 70 ಕನ್ನಡ ಕೃತಿ ಲೋಕಾರ್ಪಣೆಗೊಳಿಸಿ...

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 5:32 IST
Last Updated 28 ಡಿಸೆಂಬರ್ 2025, 5:32 IST
70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಪ್ನ ಬುಕ್ ಹೌಸ್ ಪ್ರಕಟಿಸಿದ 70 ಕನ್ನಡ ಪುಸ್ತಕಗಳನ್ನು ಪ್ರೊ.ಬಿ.ಎವಿವೇಕ ರೈ ಅವರು ಮಂಗಳೂರಿನಲ್ಲಿ ಶನಿವಾರ ಲೋಕಾರ್ಪಣೆಗೊಳಿಸಿದರು. ಪ್ರೀತೇಶ್, ಧನಂಜನಯ ಕುಂಬಳೆ, ಪ್ರೊ.ಆರ್‌.ನರಸಿಂಹಮೂರ್ತಿ ಭಾಗವಹಿಸಿದ್ದರು 
70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಪ್ನ ಬುಕ್ ಹೌಸ್ ಪ್ರಕಟಿಸಿದ 70 ಕನ್ನಡ ಪುಸ್ತಕಗಳನ್ನು ಪ್ರೊ.ಬಿ.ಎವಿವೇಕ ರೈ ಅವರು ಮಂಗಳೂರಿನಲ್ಲಿ ಶನಿವಾರ ಲೋಕಾರ್ಪಣೆಗೊಳಿಸಿದರು. ಪ್ರೀತೇಶ್, ಧನಂಜನಯ ಕುಂಬಳೆ, ಪ್ರೊ.ಆರ್‌.ನರಸಿಂಹಮೂರ್ತಿ ಭಾಗವಹಿಸಿದ್ದರು    

ಮಂಗಳೂರು: ‘ಸಾರ್ವಜನಿಕ ಗ್ರಂಥಾಲಯ ಇಲಾಖೆ ಮೂಲಕ ಸರ್ಕಾರ 2022ರಿಂದ ಪುಸ್ತಕಗಳ ಸಗಟು ಖರೀದಿ ನಡೆಸುತ್ತಿಲ್ಲ. ಸಗಟು ಖರೀದಿ ಆಯಾ ವರ್ಷವೇ ನಡೆಯುವಂತೆ ನೋಡಿಕೊಳ್ಳುವುದು ಸರ್ಕಾರದ ಸಾಂಸ್ಕೃತಿಕ ಜವಾಬ್ದಾರಿ’ ಎಂದು ಎಂದು ವಿದ್ವಾಂಸರಾದ ಪ್ರೊ.ಬಿ.ಎ ವಿವೇಕ ರೈ ಹೇಳಿದರು.

ಇಲ್ಲಿನ ಸಪ್ನ ಬುಕ್ ಹೌಸ್ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಕಟಿಸಿದ 70 ಕನ್ನಡ ಪುಸ್ತಕಗಳನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಪುಸ್ತಕಗಳ ಸಗಟು ಖರೀದಿ ಸ್ಥಗಿತಗೊಂಡರೆ ಲೇಖಕರು, ಪ್ರಕಾಶಕರು ಪ್ರಕಟಣೆಯನ್ನೇ ನಿಲ್ಲಿಸುತ್ತಾರೆ. ಹೊಸ‌ಪುಸ್ತಕಗಳಿಲ್ಲದೇ ಸಾರ್ವಜನಿಕ ಗ್ರಂಥಾಲಯಗಳು ಪಳೆಯುಳಿಕೆಯಂತಾಗುತ್ತ. ಇಂತಹ ಗ್ರಂಥಾಲಯಗಳನ್ನು ಹೆಚ್ಚಾಗಿ ಬಳಸುವ ಮಹಿಳೆಯರಲ್ಲಿ, ಮಕ್ಕಳಲ್ಲಿ ಓದುವ ಆಸಕ್ತಿ ಕುಂಠಿತಗೊಳ್ಳುತ್ತದೆ’ ಎಂದರು.

ADVERTISEMENT

‘ಜಗತ್ತಿನ ಜ್ಞಾನ ಕನ್ನಡದ ಮೂಲಕ ಬರಬೇಕು. ಡಿಜಿಟಲ್ ವೇದಿಕೆಗಳಿಂದ ಮಾಹಿತಿ ಸಿಗಬಹುದು ಆದರೆ ಮನಸಿನ ಸಾಂತ್ವನಕ್ಕೆ ಪುಸ್ತಕದ ಓದು ಬೇಕು. ಪುಸ್ತಕಗಳಿಂದ ಬಹುರೂಪಿ ಜ್ಞಾನ, ಆಳವಾದ ಚಿಂತನೆ ಲಭಿಸುತ್ತದೆ’ ಎಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕ  ಆರ್.ನರಸಿಂಹಮೂರ್ತಿ, ‘ಹೊಸ ಓದುಗರನ್ನು ಆಕರ್ಷಿಸುವ, ಓದಿನ ಆಸಕ್ತಿಯನ್ನು ಹೆಚ್ಚಿಸುವ ಅಗತ್ಯವಿದೆ’ ಎಂದರು.


ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ  ಧನಂಜಯ ಕುಂಬ್ಳೆ, ‘ಪುಸ್ತಕ ಹೊಸ ವಿಷಯ ಪರಿಚಯಿಸುವ, ಹೊಸ ಲೋಕ ತೋರಿಸುವ ಆತ್ಮ ಸಂಗಾತಿ’ ಎಂದರು.


ನಗರದ ಸಪ್ನ ಬುಕ್ ಹೌಸ್  ಶಾಖಾ ವ್ಯವಸ್ಥಾಪಕ ಪ್ರೀತೇಶ್, ಹಂಪನಕಟ್ಟ ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಪ್ರೊ.ಗಣಪತಿ ಗೌಡ, ಆಕೃತಿ ಆಶಯ ಪ್ರಕಾಶನದ ಕಲ್ಲೂರು ನಾಗೇಶ್, ಸುರತ್ಕಲ್‌ನ ಪ್ರೊ.ಕೃಷ್ಣಮೂರ್ತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.