ADVERTISEMENT

‘ಎಲ್ಲವೂ ಬದಲಾಗುತ್ತದೆ’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 4:10 IST
Last Updated 22 ಡಿಸೆಂಬರ್ 2023, 4:10 IST
ಗುರುವಾರ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ  ಸಾಹಿತಿ ರಘು ಇಡ್ಕಿದು ಅವರ ‘ಎಲ್ಲವೂ ಬದಲಾಗುತ್ತದೆ’ ಕೃತಿಯನ್ನು ಪುತ್ತೂರು ಉಮೇಶ್ ನಾಯಕ್ ಬಿಡುಗಡೆಗೊಳಿಸಿದರು
ಗುರುವಾರ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ  ಸಾಹಿತಿ ರಘು ಇಡ್ಕಿದು ಅವರ ‘ಎಲ್ಲವೂ ಬದಲಾಗುತ್ತದೆ’ ಕೃತಿಯನ್ನು ಪುತ್ತೂರು ಉಮೇಶ್ ನಾಯಕ್ ಬಿಡುಗಡೆಗೊಳಿಸಿದರು   

ಮಂಗಳೂರು: ‘ಪರಿವರ್ತನೆ ಜಗದ ನಿಯಮ, ಇದಕ್ಕೆ ಸಾಹಿತ್ಯವೂ ಹೊರತಾಗಿಲ್ಲ. ಕಾಲಕಾಲಕ್ಕೆ ಪರಿವರ್ತನೆ ಹೊಂದುತ್ತಿರುವ ಸಾಹಿತ್ಯವು ವಿಭಿನ್ನ ಪ್ರಕಾರಗಳಲ್ಲಿ ವ್ಯಕ್ತಗೊಳ್ಳುತ್ತಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲ್ಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಭಿಪ್ರಾಯಪಟ್ಟರು.

ಗುರುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾ ಪ್ರಕಾಶನ ಹೊರತಂದಿರುವ ಸಾಹಿತಿ ರಘು ಇಡ್ಕಿದು ಅವರ 29ನೇ ಕೃತಿ ‘ಎಲ್ಲವೂ ಬದಲಾಗುತ್ತದೆ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಕೆಲವು ಪದಗಳಲ್ಲಿ ಹಲವು ಭಾವಗಳನ್ನು ಹಿಡಿದಿಡುವ ಸಾಮರ್ಥ್ಯ ಚುಟುಕುಗಳಿಗಿದೆ. ರಘು ಅವರು ಹಲವಾರು ಚುಟುಕುಗಳನ್ನು ಬರೆದಿದ್ದಾರೆ ಎಂದರು.

ADVERTISEMENT

ಮುಖ್ಯ ಅತಿಥಿಯಾಗಿದ್ದ ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ. ಕೃಷ್ಣಮೂರ್ತಿ, ‘ರಘು ಇಡ್ಕಿದು ಉಪನ್ಯಾಸಕರಾಗಿ, ಅಂಕಣಕಾರರಾಗಿ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿ ಬರವಣಿಗೆ ಕೃಷಿ ಮಾಡಿದವರು. ಕನ್ನಡ ಮತ್ತು ತುಳು ಸಾಹಿತ್ಯ ಲೋಕಕ್ಕೆ ಅವರು ಕೊಡುಗೆಗಳನ್ನು ನೀಡಿದ್ದಾರೆ’ ಎಂದರು.

ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಕಾ.ವೀ. ಕೃಷ್ಣದಾಸ್, ಮಂಗಳೂರು ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಕೃಷ್ಣ ಶಾಸ್ತ್ರಿ, ಪ್ರಕಾಶಕಿ ವಿದ್ಯಾ ಯು. ಇದ್ದರು. ಕೃತಿ ರಘು ಇಡ್ಕಿದು ಸ್ವಾಗತಿಸಿದರು. ಎನ್. ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.