ADVERTISEMENT

ಪುತ್ತೂರು: ನಿರ್ಮಾಣ ಹಂತದ ಚೆಲ್ಯಡ್ಕ ಸೇತುವೆ ಮುಳುಗಡೆ

ಮೇಲ್ಭಾಗದಲ್ಲಿದ್ದ ಕಿಂಡಿ ಅಣೆಕಟ್ಟೆ ಹಲಗೆ ಜಾರಿ ಹರಿದ ನೀರು

​ಪ್ರಜಾವಾಣಿ ವಾರ್ತೆ
Published 5 ಮೇ 2025, 13:06 IST
Last Updated 5 ಮೇ 2025, 13:06 IST
ಕಿಂಡಿ ಅಣೆಕಟ್ಟೆಗೆ ಜೋಡಿಸಲಾದ ಹಲಗೆ ಜಾರಿ ನೀರು ಹರಿದಿದ್ದರಿಂದ ಕಾಮಗಾರಿ ಹಂತದಲ್ಲಿರುವ ಚೆಲ್ಯಡ್ಕ ಸೇತುವೆ ಮುಳಗುಗಡೆಯಾಗಿದೆ
ಕಿಂಡಿ ಅಣೆಕಟ್ಟೆಗೆ ಜೋಡಿಸಲಾದ ಹಲಗೆ ಜಾರಿ ನೀರು ಹರಿದಿದ್ದರಿಂದ ಕಾಮಗಾರಿ ಹಂತದಲ್ಲಿರುವ ಚೆಲ್ಯಡ್ಕ ಸೇತುವೆ ಮುಳಗುಗಡೆಯಾಗಿದೆ   

ಪುತ್ತೂರು: ಇತ್ತೀಚೆಗೆ ಸುರಿದ ಮಳೆಯಿಂದಾಗಿ ದೇವಸ್ಯ-ಪಾಣಾಜೆ ರಸ್ತೆಯ ಚೆಲ್ಯಡ್ಕದಲ್ಲಿದ್ದ ಮುಳುಗು ಸೇತುವೆಯ ಮೇಲ್ಭಾಗದ ಕಿಂಡಿ ಅಣೆಕಟ್ಟಿನಲ್ಲಿ ಸಂಗ್ರಹವಾಗಿದ್ದ ಮಳೆನೀರು ಭಾನುವಾರ ಸಂಜೆ ಏಕಾಏಕಿ ಹರಿದು ಕಾಮಗಾರಿ ಹಂತದಲ್ಲಿರುವ ಸೇತುವೆ, ಹೊಳೆಯಲ್ಲಿ ನಿರ್ಮಿಸಲಾದ ತಾತ್ಕಾಲಿಕ ಶೆಡ್ ಮುಳುಗಡೆಯಾಗಿದೆ.

ಹಳೆ ಮುಳುಗು ಸೇತುವೆ ತೆರವುಗೊಳಿಸಿ ₹ 3 ಕೋಟಿ ವೆಚ್ಚದಲ್ಲಿ ನೂತನ ಸೇತುವೆ ಕಾಮಗಾರಿ ನಡೆಯುತ್ತಿದೆ. ಕಿಂಡಿ ಅಣೆಕಟ್ಟೆಗೆ ಜೋಡಿಸಿದ್ದ ಹಲಗೆ ಜಾರಿ ಏಕಾಏಕಿ ನೀರು ಹರಿದಿದೆ.

ಹೊಸ ಸೇತುವೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಶೇ 75ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಚೆಲ್ಯಡ್ಕ ಸೇತುವೆಯಿಂದ ಮೇಲ್ಭಾಗದಲ್ಲಿರುವ ನೀರ್ಪಾಡಿ ಕೂಟೇಲು ಎಂಬಲ್ಲಿ ಕಿಂಡಿ ಅಣೆಕಟ್ಟೆಗೆ ಹಲಗೆ ಜೋಡಿಸಿ ನೀರು ಶೇಖರಿಸಲಾಗಿತ್ತು. ಮಳೆ ನೀರು ಸೇರಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿತ್ತು.

ADVERTISEMENT

ಸ್ಥಳೀಯರು ಸೇರಿ ನೀರಿನ ಹರಿವಿಗೆ ಪರ್ಯಾಯ ವ್ಯವಸ್ಥೆ ಮಾಡಿದರು.

ಕಿಂಡಿ ಅಣೆಕಟ್ಟೆಗೆ ಜೋಡಿಸಲಾದ ಹಲಗೆ ಜಾರಿ ನೀರು ಹರಿದಿದ್ದರಿಂದ ಕಾಮಗಾರಿ ಹಂತದಲ್ಲಿರುವ ಚೆಲ್ಯಡ್ಕ ಸೇತುವೆ ಮುಳಗುಗಡೆಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.