ADVERTISEMENT

ಬಂಟರ ಒಗ್ಗಟ್ಟು; ಶ್ರೇಯಸ್ಸಿನ ಗುಟ್ಟು

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾಸಭೆಯಲ್ಲಿ ಒಡಿಯೂರು ಶ್ರೀ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:03 IST
Last Updated 26 ನವೆಂಬರ್ 2025, 5:03 IST
ಜಾಗತಿಕ ಬಂಟರ ಸಂಘಗಳ ಒಕ್ಕೂಟದ 29ನೇ ವಾರ್ಷಿಕ ಮಹಾಸಭೆಯಲ್ಲಿ ವಿವಿಧ ಕ್ಷೇತ್ರಗಳನ್ನು ಸಾಧಕರನ್ನು ಸನ್ಮಾನಿಸಲಾಯಿತು : ಪ್ರಜಾವಾಣಿ ಚಿತ್ರ
ಜಾಗತಿಕ ಬಂಟರ ಸಂಘಗಳ ಒಕ್ಕೂಟದ 29ನೇ ವಾರ್ಷಿಕ ಮಹಾಸಭೆಯಲ್ಲಿ ವಿವಿಧ ಕ್ಷೇತ್ರಗಳನ್ನು ಸಾಧಕರನ್ನು ಸನ್ಮಾನಿಸಲಾಯಿತು : ಪ್ರಜಾವಾಣಿ ಚಿತ್ರ   

ಮಂಗಳೂರು: ಬಂಟ ಸಮಾಜಕ್ಕೆ ರಾಜ್ಯವನ್ನು ಆಳುವ ಸಾಮರ್ಥ್ಯವಿದೆ. ವಿಶ್ವದೆಲ್ಲೆಡೆ ಇರುವ ಬಂಟರು ಒಗ್ಗೂಡಿದರೆ ರಾಷ್ಟ್ರ ಸುಭದ್ರವಾಗುತ್ತದೆ ಎಂದು ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಮಂಗಳವಾರ ಇಲ್ಲಿ ಆಯೋಜಿಸಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ 29ನೇ ವಾರ್ಷಿಕ ಮಹಾಸಭೆ, ಬಹಿರಂಗ ಅಧಿವೇಶನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬಂಟ ಸಮಾಜದವರು ಸುಸಂಸ್ಕೃತರು. ಜ್ಞಾನಶಕ್ತಿ, ಕ್ರಿಯಾಶಕ್ತಿ, ಲಕ್ಷ್ಮಿ ಎಲ್ಲವೂ ಒಗ್ಗೂಡಿದಾಗ ಸಮುದಾಯ ಶ್ರೇಯಸ್ಸು ಸಾಧ್ಯವಾಗುತ್ತದೆ ಎಂದರು.

ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ‘ಸಾಮಾಜಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡುವವರಿಗೆ ಬಂಟರ ಸಂಘ ಪ್ರೇರಣೆಯಾಗಿದೆ. ಎಲ್ಲ ಸಮುದಾಯವನ್ನು ಒಳಗೊಂಡು ಬಂಟರ ಸಂಘಗಳು ಕೆಲಸ ಮಾಡುತ್ತವೆ. ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯವಲ್ಲಿ ಬಂಟರ ಸಂಘಗಳ ಕೊಡುಗೆ ಪ್ರಾಮುಖ್ಯವಾಗಿದೆ’ ಎಂದರು.

ADVERTISEMENT

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಾಗತಿಕ ಬಂಟರ ಒಕ್ಕೂಟವು ಬಡವರಿಗೆ ನೆರವಾಗುವ ಅನೇಕ ಕೆಲಸಗಳನ್ನು ಮಾಡಿದೆ. ಆರೋಗ್ಯ, ಶಿಕ್ಷಣ, ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ನೆರವು ನೀಡಲಾಗಿದೆ. ದಾನಿಗಳೇ ಈ ಎಲ್ಲ ಯಶಸ್ಸಿನ ಸೂತ್ರಧಾರಿಗಳು ಎಂದರು.

ಬಂಟರ ಸಂಘದ ದುಬೈ ಯುಎಇ ಅಧ್ಯಕ್ಷ ವಕ್ವಾಡಿ ಪ್ರವೀಣ್ ಶೆಟ್ಟಿ, ಮುಂಬೈ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿದರು. ವಿವಿಧ ಕ್ಷೇತ್ರಗಳ ಸಾಧಕರು, ವಿವಿಧ ಪ್ರಶಸ್ತಿ ವಿಜೇತರನ್ನು ಗೌರವಿಸಲಾಯಿತು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಅಶೋಕ್ ಶೆಟ್ಟಿ ಬಿಲ್ಲಾಡಿ, ಉಮಾ ಶೆಟ್ಟಿ, ಶಶಿಧರ್ ಶೆಟ್ಟಿ ಇನ್ನಂಜೆ, ಅಜಿತ್ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಮೋಹನ್ ದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ರಂಗೋಲಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ಪೃಥ್ವಿರಾಜ್ ರೈ, ಎ.ಸಿ. ಭಂಡಾರಿ, ಸುಧಾಕರ್ ಎಸ್ ಪೂಂಜ, ಮಂಜು ಕೊಡ್ಲಾಡಿ, ಆನಂದ್ ಶೆಟ್ಟಿ, ನಾಗೇಶ್ ಶೆಟ್ಟಿ, ಅನಿಲ್ ಶೆಟ್ಟಿ, ರಾಜೀವ್ ಭಂಡಾರಿ, ಒಕ್ಕೂಟದ ಸಂಚಾಲಕ ಬಾಲಕೃಷ್ಣ ರೈ ಕೊಲ್ಲಾಡಿ  ಉಪಸ್ಥಿತರಿದ್ದರು.‌

ನಿತೇಶ್ ಶೆಟ್ಟಿ ಎಕ್ಕಾರ್, ಪ್ರಿಯಾ ಹರೀಶ್ ಶೆಟ್ಟಿ, ರಾಜೇಶ್ವರಿ ಡಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.