ADVERTISEMENT

ಕ್ಯಾಂಪಸ್‌ಗೆ ಕುಸಂಸ್ಕೃತಿ ಕಾಲಿಡಲು ಬಿಡಬೇಡಿ: ಶೇಖ್ ಅಬ್ದುಸಲಾಂ ಮದನಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 6:13 IST
Last Updated 11 ಅಕ್ಟೋಬರ್ 2025, 6:13 IST
<div class="paragraphs"><p>ಸಮ್ಮೇಳನ ಉದ್ಘಾಟಿಸಿ ಆಸ್ಪೈರ್ ಕಾಲೇಜಿನ ಸ್ಥಾಪಕ ಶೇಖ್ ಅಬ್ದುಸಲಾಂ ಮದನಿ ಮಾತನಾಡಿದರು</p></div>

ಸಮ್ಮೇಳನ ಉದ್ಘಾಟಿಸಿ ಆಸ್ಪೈರ್ ಕಾಲೇಜಿನ ಸ್ಥಾಪಕ ಶೇಖ್ ಅಬ್ದುಸಲಾಂ ಮದನಿ ಮಾತನಾಡಿದರು

   

ಮಂಗಳೂರು: ಮಾದಕ ಪದಾರ್ಥ ಸೇವನೆಯಂಥ ಕುಸಂಸ್ಕೃತಿ ಕಾಲೇಜು ಕ್ಯಾಂಪಸ್‌ನ ಒಳಗೆ ಪ್ರವೇಶಿಸುವುದರ ಬಗ್ಗೆ ಗಂಭೀರ ಚಿಂತನೆ ನಡೆಯಬೇಕು ಎಂಬ ಸಂದೇಶದೊಂದಿಗೆ ವೃತ್ತಿಪರ ವಿದ್ಯಾರ್ಥಿಗಳ ಜಾಗತಿಕ ಸಮ್ಮೇಳನ ಪ್ರೊಫ್‌ಕಾನ್ ನಗರದಲ್ಲಿ ಶುಕ್ರವಾರ ಆರಂಭಗೊಂಡಿತು. 

ವಿಸ್ಡಮ್‌ ಇಸ್ಲಾಮಿಕ್ ವಿದ್ಯಾರ್ಥಿ ಸಂಘಟನೆ ಆಯೋಜಿಸಿರುವ 29ನೇ ಸಮ್ಮೇಳನದಲ್ಲಿ ಪಾಲ್ಗೊಂಡ ಗಣ್ಯರು ಮಾತನಾಡಿ ವಿದ್ಯಾರ್ಥಿಗಳನ್ನು ಸಮಾಜಘಾತುಕರನ್ನಾಗಿ ಮಾಡಲು ಪ್ರಯತ್ನಿಸುವ ಶಕ್ತಿಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಬೇಕು. ಮದ್ಯ, ಮಾದಕ ಪದಾರ್ಥಗಳಿಗೆ ಬಲಿಯಾಗದಂತೆ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದರು. 

ADVERTISEMENT

ವಿದ್ಯಾರ್ಥಿಗಳ ಮೇಲೆ ಪಾಲಕರು ಸದಾ ಕಣ್ಣಿಟ್ಟಿರಬೇಕು. ಅವರು ಹಾದಿ ತಪ್ಪದಂತೆ ನೋಡಿಕೊಳ್ಳಬೇಕು. ಕೃತಕ ಬುದ್ದಿಮತ್ತೆ ಮತ್ತು ಜ್ಞಾನದ ಕ್ರಾಂತಿ ನಡೆಯುತ್ತಿರುವ ಇಂದಿನ ಕಾಲದಲ್ಲೂ ವಿದ್ಯಾರ್ಥಿಗಳು ಅನೈತಿಕತೆಯ ಬಲೆಗೆ ಬೀಳುತ್ತಿರುವುದು ಗಂಭೀರವಾಗಿ ಆಲೋಚನೆ ಮಾಡಬೇಕಾದ ವಿಷಯ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಆಸ್ಪೈರ್ ಕಾಲೇಜಿನ ಸ್ಥಾಪಕ ಶೇಖ್ ಅಬ್ದುಸಲಾಂ ಮದನಿ ಸಮ್ಮೇಳನ ಉದ್ಘಾಟಿಸಿದರು. ವಿಸ್ಡಮ್ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಶಹಬಾಜ್‌ ಕೆ.ಅಬ್ಬಾಸ್‌ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ವಿಸ್ಡಮ್‌ನ ಕೋಶಾಧಿಕಾರಿ ಅನ್ಫಾಸ್ ಮುಕ್ರಂ, ಕಾರ್ಯದರ್ಶಿಗಳಾದ ಇ.ಸುಜೈದ್ ಮತ್ತು ಕೆ.ಎಂ ಶಾಮಿಲ್‌, ಜಿಲ್ಲಾ ಅಧ್ಯಕ್ಷ ಬಶೀರ್ ಕೊಂಬನಡುಕಂ, ಕರ್ನಾಟಕ ಸಲಾಫಿ ಅಸೋಸಿಯೇಷನ್‌ನ ಕೋಶಾಧಿಕಾರಿ ಸೈಯಿದ್ ಶಾಜ್‌ ಇದ್ದರು. ಸಮ್ಮೇ ಳನ ಭಾನುವಾರ ಮುಕ್ತಾಯಗೊಳ್ಳಲಿದೆ.