ADVERTISEMENT

ಸುಳ್ಯ: ದುಗಲಡ್ಕ ಕಂದಡ್ಕದಲ್ಲಿ ಬಾಲ್ಯವಿವಾಹ ತಡೆದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 7:26 IST
Last Updated 15 ಜುಲೈ 2021, 7:26 IST
ಸಿ.ಡಿ.ಪಿ.ಒ. ನೇತೃತ್ವದಲ್ಲಿ ದಾಳಿ
ಸಿ.ಡಿ.ಪಿ.ಒ. ನೇತೃತ್ವದಲ್ಲಿ ದಾಳಿ   

ಸುಳ್ಯ: ಇಲ್ಲಿನ ಪಂಚಾಯಿತಿ ವ್ಯಾಪ್ತಿಯ ದುಗಲಡ್ಕ ಕಂದಡ್ಕಕ್ಕೆ ಬುಧವಾರ ರಾತ್ರಿ ಸಿ.ಡಿ.ಪಿ.ಒ. ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಬಾಲ್ಯವಿವಾಹವೊಂದನ್ನು ತಡೆದ ಘಟನೆ ನಡೆದಿದೆ.

ಕಂದಡ್ಕದ ತಮಿಳು ಕುಟುಂಬವೊಂದರ ಪ್ರತಾಪ ಎಂಬ 26 ವರ್ಷದ ಯುವಕನಿಗೆ ಗುರುವಾರ ಮೈಸೂರಿನ ಹುಡುಗಿಯೊಂದಿಗೆ ಮದುವೆ ನಡೆಯುವುದಿತ್ತು. ಈ ಹುಡುಗಿಗೆ 18 ವರ್ಷ ಆಗಿಲ್ಲ ಎಂದು ಜು.14 ರಂದು ಸಂಜೆ ಸಿ.ಡಿ.ಪಿ.ಒ.ರವರಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.

ಮಾಹಿತಿ ಬಂದ ಕೂಡಲೇ ಸಿ.ಡಿ.ಪಿ.ಒ. ರಶ್ಮಿ ಅಶೋಕ್ ಅವರು ಇಲಾಖೆಯ ಮೇಲ್ವಿಚಾರಕಿ ಹಾಗೂ ಸಹಾಯಕ ಮಕ್ಕಳ ಸಂರಕ್ಷಣಾಧಿಕಾರಿ ದೀಪಿಕಾ, ಗ್ರಾಮಕರಣಿಕ ತಿಪ್ಪೇಶ್, ನಾಲ್ಕು ಮಂದಿ ಪೊಲೀಸರ ಜತೆಗೆ ಕಂದಡ್ಕ ಎಂಬ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ADVERTISEMENT

ಆಗಲೇ ಮದುವೆಗೆ ಹುಡುಗಿ ಕಡೆಯವರು ಮೈಸೂರಿನಿಂದ ಆಗಮಿಸಿದ್ದರು.ಅವರ ಜೊತೆ ವಿಚಾರಿಸಿದಾಗ ಹುಡುಗಿಗೆ 18 ವರ್ಷ ತುಂಬಿರುವ ಬಗ್ಗೆ ದಾಖಲೆ ಸಲ್ಲಿಸಲು ಅವರಿಗೆ ಸಾಧ್ಯವಾಗಲಿಲ್ಲವೆಂದು ಗೊತ್ತಾಗಿದೆ. ಬಳಿಕ ಅಧಿಕಾರಿಗಳು ಬಾಲ್ಯವಿವಾಹದ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ.

18 ವರ್ಷ ತುಂಬಿದ ಬಳಿಕವೇ ಮದುವೆ ಮಾಡಿಸುವುದಾಗಿ ಹೇಳಿ ಯುವತಿಯ ಮನೆಯವರು ಮೈಸೂರಿಗೆ ಹಿಂತಿರುಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.