ಮೂಲ್ಕಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕೋಳಿ ಅಂಕಕ್ಕೆ ಸುಲಭವಾಗಿ ಅನುಮತಿ ಸಿಗುತ್ತದೆ. ಆದರೆ, ಮನೆ ನಿರ್ಮಾಣಕ್ಕೆ ಬೇಕಾದ ಮರಳು, ಕೆಂಪುಕಲ್ಲು ಸಹಿತ ಜಮೀನಿನ ಅನುಮತಿ ಸಿಗುತ್ತಿಲ್ಲ. ಸರ್ಕಾರದ ವಿರುದ್ಧ ಜನರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಈಶ್ವರ ಕಟೀಲು ಹೇಳಿದರು.
ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ ಮುಂದೆ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಶೇಖ್, ಸೋಂದಾ ಭಾಸ್ಕರ ಭಟ್ ಮಾತನಾಡಿದರು.
ಕಸ್ತೂರಿ ಪಂಜ, ಕೆ.ಭುವನಾಭಿರಾಮ ಉಡುಪ, ಅಭಿಲಾಷ್ ಶೆಟ್ಟಿ, ದಿವಾಕರ ಕರ್ಕೇರ, ಆಶಾ ರತ್ನಾಕರ್, ಭಾಸ್ಕರ ಉಲ್ಲಂಜೆ, ಸೂರಜ್ ಶೆಟ್ಟಿ, ಜಯಾನಂದ ಮೂಲ್ಕಿ, ಕೇಶವ ಕರ್ಕೇರ, ಅರುಣ್‌ಕುಮಾರ್, ಲೋಕಯ್ಯ ಸಾಲ್ಯಾನ್, ಪ್ರೇಮರಾಜ್ ಶೆಟ್ಟಿ ಭಾಗವಹಿಸಿದ್ದರು.
ಮೂಲ್ಕಿ ತಾಲ್ಲೂಕಿನ ಕಿಲ್ಪಾಡಿ ಗ್ರಾಮ ಪಂಚಾಯಿತಿಯ ಮುಂದೆ ವಿಕಾಸ್ ಶೆಟ್ಟಿ, ಮೂಲ್ಕಿ ಪಟ್ಟಣ ಪಂಚಾಯಿತಿಯಲ್ಲಿ ಸತೀಶ್ ಅಂಚನ್, ಪಡುಪಣಂಬೂರಿನಲ್ಲಿ ಕುಸುಮಾ, ಕೆಮ್ರಾಲ್‌ನಲ್ಲಿ ವಿನೋದ್ ಬೊಳ್ಳೂರು, ಐಕಳದಲ್ಲಿ ದಿವಾಕರ ಚೌಟ, ಅತಿಕಾರಿಬೆಟ್ಟುವಿನಲ್ಲಿ ಮನೋಹರ್, ಬಳ್ಕುಂಜೆಯಲ್ಲಿ ಮಮತಾ ಪೂಂಜ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.