ADVERTISEMENT

ದಕ್ಷಿಣ ಕನ್ನಡ: ಕೋವಿಡ್ ಸಕ್ರಿಯ ಪ್ರಕರಣಗಳ ಕುಸಿತ

ದಕ್ಷಿಣ ಕನ್ನಡ: ಸೋಂಕಿತರಿಗಿಂತ ಗುಣಮುಖರೇ ಅಧಿಕ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 3:45 IST
Last Updated 4 ನವೆಂಬರ್ 2020, 3:45 IST

ಮಂಗಳೂರು: ಜಿಲ್ಲೆಯಲ್ಲಿ ಗುಣಮುಖರ ಸಂಖ್ಯೆಯೇ ಅಧಿಕವಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ ಮಂಗಳವಾರ 123 ಮಂದಿಗೆ ಕೋವಿಡ್–19 ದೃಢವಾಗಿದ್ದು, 147 ಮಂದಿ ಗುಣಮುಖರಾಗಿದ್ದಾರೆ. ಮೃತಪಟ್ಟ ಒಬ್ಬರಿಗೆ ಕೋವಿಡ್ ಇರುವುದು ಮಂಗಳವಾರ ಖಚಿತವಾಗಿದೆ.

ಇದುವರೆಗೆ 2.61 ಲಕ್ಷ ಮಂದಿಯ ಗಂಟಲು ದ್ರವ ಪರೀಕ್ಷಿಸಿದ್ದು, 2.30 ಲಕ್ಷ ಮಂದಿಯ ವರದಿ ನೆಗೆಟಿವ್‌ ಬಂದಿದೆ. 30,515 ಮಂದಿಗೆ ಕೋವಿಡ್ ದೃಢವಾಗಿದ್ದು, ಒಟ್ಟು 28,146 ಜನರು ಗುಣಮುಖರಾಗಿದ್ದಾರೆ. ಸದ್ಯ 1,687 ಸಕ್ರಿಯ ಪ್ರಕರಣಗಳಿದ್ದು, ಮೃತರ ಸಂಖ್ಯೆ 680ಕ್ಕೆ ತಲುಪಿದೆ.

ದಂಡ: ಮಾಸ್ಕ್‌ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಇದುವರೆಗೆ 10,991 ಪ್ರಕರಣ ಪತ್ತೆಯಾಗಿದ್ದು, ₹12 ಲಕ್ಷ ದಂಡ ವಸೂಲಿ ಮಾಡಲಾಗಿದೆ.

ADVERTISEMENT

ಕಾಸರಗೋಡಿನಲ್ಲಿ 147 ಪ್ರಕರಣ: ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 147 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ.
ಈ ಪೈಕಿ 145 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. 292 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 18,988 ಮಂದಿಗೆ ಕೋವಿಡ್‌–ದೃಢವಾಗಿದ್ದು, 17,213 ಮಂದಿ ಗುಣಮುಖರಾಗಿದ್ದಾರೆ, 1,448 ಸಕ್ರಿಯ ಪ್ರಕರಣಗಳಿದ್ದು, 197 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.