ADVERTISEMENT

ಭಟ್ಕಳದಲ್ಲಿ ಮತ್ತೆ ಏಳು ಮಂದಿಗೆ ಕೋವಿಡ್-19 ದೃಢ

​ಪ್ರಜಾವಾಣಿ ವಾರ್ತೆ
Published 9 ಮೇ 2020, 8:37 IST
Last Updated 9 ಮೇ 2020, 8:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ಭಟ್ಕಳದಲ್ಲಿ ಕೋವಿಡ್-19ನ ಏಳು ಪ್ರಕರಣಗಳು ಶನಿವಾರ ದೃಢಪಟ್ಟಿವೆ. ಅವರಲ್ಲಿ ನಾಲ್ವರು ಮಹಿಳೆಯರು ಹಾಗೂ ಮೂವರು ಪುರುಷರಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 31ಕ್ಕೇರಿದೆ. ಹೊಸದಾಗಿ ದೃಢಪಟ್ಟಿರುವ ಪ್ರಕರಣಗಳಲ್ಲಿ 1.5 ವರ್ಷದ ಗಂಡುಮಗು ಹಾಗೂ 2.3 ವರ್ಷದ ಹೆಣ್ಣುಮಗು ಕೂಡ ಸೇರಿದ್ದಾರೆ. 68 ಮತ್ತು 65 ವರ್ಷದ ಇಬ್ಬರು ವೃದ್ಧರಿಗೂ ಸೋಂಕು ಖಚಿತವಾಗಿದೆ. ಏಳು ಮಂದಿಯ ಪೈಕಿ ಆರು ಮಂದಿ ರೋಗಿ ಸಂಖ್ಯೆ 659ರ ದ್ವಿತೀಯ ಸಂಪರ್ಕಕ್ಕೆ ಬಂದವರಾಗಿದ್ದಾರೆ. 68 ವರ್ಷದ ವೃದ್ಧ 740ನೇ ಸಂಖ್ಯೆಯ ರೋಗಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು.

ಭಟ್ಕಳದಲ್ಲಿ ಶುಕ್ರವಾರ ಒಂದೇ ದಿನ 12 ಮಂದಿಗೆ ಕೋವಿಡ್ 19 ದೃಢಪಟ್ಟಿತ್ತು. ಜಿಲ್ಲೆಯಲ್ಲಿ ಒಟ್ಟು 11 ಮಂದಿ ಈಗಾಗಲೇ ಗುಣಮುಖರಾಗಿದ್ದು, 20 ಸಕ್ರಿಯ ಪ್ರಕರಣಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT