ಕಾಸರಗೋಡು: ಸಿಪಿಎಂ ಜಿಲ್ಲಾ ಸಮ್ಮೇಳನ ಬುಧವಾರ ಕಾಞಂಗಾಡಿನ ಕೋಟಚ್ಚೇರಿ ಮಾವುಂಗಾಲ್ ರಸ್ತೆ ಬದಿಯ ಮೈದಾನದಲ್ಲಿ ನಡೆಯಿತು. ಜಿಲ್ಲೆಯ 12 ವಲಯಗಳಿಂದ 281 ಪ್ರತಿನಿಧಿಗಳು, 36 ಜಿಲ್ಲಾ ಸಮಿತಿ ಸದಸ್ಯರೂ ಸೇರಿ 317 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು.
ಪಾಲಿಟ್ ಬ್ಯೂರೊ ಸದಸ್ಯ ಎ.ವಿಜಯರಾಘವನ್ ಸಮ್ಮೇಳನ ಉದ್ಘಾಟಿಸಿದರು. ಪಿ.ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು. ಇ.ಪಿ.ಜಯರಾಜನ್, ಪಿ.ಕೆ.ಶ್ರೀಮತಿ, ಟಿ.ಪಿ.ರಾಮಕೃಷ್ಣನ್, ವಿ.ಜಯರಾಜನ್, ಪಿ.ಕೆ.ಬಿಜು ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.