ಉಳ್ಳಾಲ (ದಕ್ಷಿಣ ಕನ್ನಡ): ಇಲ್ಲಿನ ಉಳ್ಳಾಲ ಸೈಯ್ಯದ್ ಮದನಿ ದರ್ಗಾದ ಉರುಸ್ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 50 ಕುರಿಗಳ ಹರಕೆ ಸಮರ್ಪಿಸುವುದಾಗಿ ತಿಳಿಸಿದರು.
ದರ್ಗಾದಲ್ಲಿ ಝಿಯಾರತ್ ನಡೆಸಿದ ನಂತರ ಮಾತನಾಡಿದ ಅವರು, ‘ದೇಶದ ಏಕತೆಯ ಸಂಕೇತವಾಗಿ ಉಳ್ಳಾಲ ದರ್ಗಾದ ಉರುಸ್‌ನಲ್ಲಿ ಹಲವರು ಭಾಗಿಯಾಗುತ್ತಾರೆ. ಉಳ್ಳಾಲ ದರ್ಗಾ ಸಮಿತಿ ಹೇಳಿಕೆಯಂತೆ ಇದು ದೇಶದಲ್ಲಿಯೇ ಎರಡನೇ ಪವಿತ್ರ ಕ್ಷೇತ್ರವೆಂಬ ಮಾನ್ಯತೆ ಪಡೆದಿದೆ’ ಎಂದರು.
‘ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರ ಬೇಡಿಕೆಯನ್ನು ಪುರಸ್ಕರಿಸಿ ರಾಜ್ಯ ಸರ್ಕಾರ ₹3 ಕೋಟಿ ಅನುದಾನ ಮಂಜೂರು ಮಾಡಿದೆ’ ಎಂದು ತಿಳಿಸಿದರು.
ಯು.ಟಿ.ಖಾದರ್, ಖತೀಬ್ ಸಿರಾಜುದ್ದೀನ್ ಹಿಮಮಿ, ಕೇಂದ್ರ ಜುಮಾ ಮಸೀದಿ ಖತೀಬ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲ್, ದರ್ಗಾ ಅಧ್ಯಕ್ಷ ಹನೀಫ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.