ADVERTISEMENT

ಉಪ್ಪಿನಂಗಡಿ ಮೇಲ್ಸೇತುವೆ: ಪ್ರಾಯೋಗಿಕ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 30 ಮೇ 2025, 14:14 IST
Last Updated 30 ಮೇ 2025, 14:14 IST
ಉಪ್ಪಿನಂಗಡಿಯ ಚತುಷ್ಪಥ ಮೇಲ್ಸೇತುವೆಯಲ್ಲಿ ವಾಹನಗಳ ಪ್ರಾಯೋಗಿಕ ಸಂಚಾರ ಆರಂಭವಾಯಿತು
ಉಪ್ಪಿನಂಗಡಿಯ ಚತುಷ್ಪಥ ಮೇಲ್ಸೇತುವೆಯಲ್ಲಿ ವಾಹನಗಳ ಪ್ರಾಯೋಗಿಕ ಸಂಚಾರ ಆರಂಭವಾಯಿತು   

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ವಾಹನ ದಟ್ಟಣೆ ನಿವಾರಿಸಲು ಇಲ್ಲಿನ ಮೇಲ್ಸೇತುವೆಯಲ್ಲಿ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದರಿಂದ ಹಿರೇಬಂಡಾಡಿ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸುತ್ತು ಬಳಸಿ ಅಥವಾ ಉಪ್ಪಿನಂಗಡಿ ಅಂಡರ್ ಪಾಸ್ ಬಳಸಿ ಸಂಚಾರವನ್ನು ಮುಂದುವರಿಸಬೇಕಿದೆ. ಮಳೆಯಿಂದಾಗಿ ಸರ್ವಿಸ್‌ ರಸ್ತೆಯಲ್ಲಿ ಉಂಟಾಗಿರುವ ಹೊಂಡಗಳಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿತ್ತು.

ಮೇಲ್ಸೇತುವೆಗೆ ತಡೆಗೋಡೆ ನಿರ್ಮಿಸಿಲ್ಲ. ವಾಹನ ಸಂಚಾರದ ವೇಳೆ ಎಚ್ಚರ ತಪ್ಪಿದರೆ ಅಪಾಯ ಉಂಟಾಗುವ ಭೀತಿ ಉಂಟಾಗಿದೆ. ರಸ್ತೆಯ ಎರಡೂ ಬದಿಯ ಸರ್ವಿಸ್‌ ರಸ್ತೆಗೂ ಕಾಂಕ್ರೀಟ್ ಹಾಕದೆ ಇರುವುದರಿಂದ ಅಲ್ಲಲ್ಲಿ ಹೊಂಡ ನಿರ್ಮಾಣ ಆಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.