ADVERTISEMENT

ವ್ಯಸನ ಮುಕ್ತರಾಗಲು ಟೆಲಿಕೌನ್ಸೆಲಿಂಗ್

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 15:46 IST
Last Updated 1 ಏಪ್ರಿಲ್ 2020, 15:46 IST

ಉಜಿರೆ: ಮದ್ಯವರ್ಜನ ಬಾಧಿತ ಕುಟುಂಬಗಳಿಗೆ ಸಕಾಲಿಕ ಮಾರ್ಗದರ್ಶನ ನೀಡಲು ದೂರವಾಣಿ ಮೂಲಕ (ಟೆಲಿ ಕೌನ್ಸೆಲಿಂಗ್) ಸೌಲಭ್ಯ ಕಲ್ಪಿಸಲಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿರ್ದೇಶಕ ವಿವೇಕ ವಿ. ಪಾಯಸ್ ತಿಳಿಸಿದ್ದಾರೆ.

ಇಲ್ಲಿರುವ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದ ಮೂಲಕ ವ್ಯಸನ ಮುಕ್ತರಾಗಲು ಬಯಸುವವರಿಗೆ ಟೆಲಿ ಕೌನ್ಸೆಲಿಂಗ್‌ ನಡೆಸಲಾಗುವುದು. ಮನೋವೈದ್ಯರಾದ ಉಡುಪಿಯ ಡಾ.ಪಿ.ವಿ. ಭಂಡಾರಿ ಮತ್ತು ಮಂಗಳೂರಿನ ಡಾ. ಶ್ರೀನಿವಾಸ ಭಟ್ ಉಚಿತ ಮಾರ್ಗದರ್ಶನ ಹಾಗೂ ಸಲಹೆ ನೀಡುವರು. ತಮ್ಮ ಸಮಸ್ಯೆಗಳಿದ್ದಲ್ಲಿ (ಮೊ. 9972272756 ಅಥವಾ 7899692619) ದೂರವಾಣಿ ಸಂಪರ್ಕಿಸಿ ಸಲಹೆ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT