ADVERTISEMENT

ಕುಕ್ಕೆ: 23ರಂದು ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 20:53 IST
Last Updated 13 ನವೆಂಬರ್ 2022, 20:53 IST
ಭಜನಾ ತಂಡಗಳ ನೋಂದಣಿಗಾಗಿ ನೀಡಿರುವ ಕ್ಯೂಆರ್‌ ಕೋಡ್‌
ಭಜನಾ ತಂಡಗಳ ನೋಂದಣಿಗಾಗಿ ನೀಡಿರುವ ಕ್ಯೂಆರ್‌ ಕೋಡ್‌   

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಲ್ಲಿ ಚಂಪಾಷಷ್ಠಿ ಮಹೋತ್ಸವ ಪ್ರಯುಕ್ತ ನ. 23ರಂದು ಲಕ್ಷ ದೀಪೋತ್ಸವ ನಡೆಯಲಿದೆ.

‘ಚಂಪಾಷಷ್ಠಿ ಮಹೋತ್ಸವಕ್ಕೆ ನ.21ರ ಕಾರ್ತಿಕ ದ್ವಾದಶಿಯಂದು ಬೆಳಿಗ್ಗೆ ಕೊಪ್ಪರಿಗೆ ಏರುವ ಮೂಲಕ ಚಾಲನೆ ಲಭಿಸಲಿದೆ. ಡಿ.5 ಮಾರ್ಗಶಿರ ಶುದ್ಧ ದ್ವಾದಶಿಯಂದು ಬೆಳಿಗ್ಗೆ ಕೊಪ್ಪರಿಗೆ ಇಳಿದು, ರಾತ್ರಿ ನೀರು ಬಂಡಿ ಉತ್ಸವ, ದೈವಗಳ ನಡಾವಳಿ ನಡೆಯುವುದರೊಂದಿಗೆ ಸಂಪನ್ನಗೊಳ್ಳಲಿದೆ’ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ ರಾಂ ಸುಳ್ಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಲಕ್ಷ ದೀಪೋತ್ಸವದ ದಿನ ಸಂಜೆ 7ರಿಂದ ದೇವಳದ ರಾಜಗೋಪುರದ ಬಳಿಯಿಂದ ರಥಬೀದಿ, ಅಡ್ಡಬೀದಿ, ಕಾಶಿಕಟ್ಟೆಯಾಗಿ ಕುಮಾರಧಾರಾದವರೆಗೆ ಕುಣಿತ ಭಜನೆ ಆಯೋಜಿಸಲಾಗಿದೆ. ಕುಣಿತ ಭಜನೆಯಲ್ಲಿ 1 ಸಾವಿರ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಭಾಗವಹಿಸುವ ತಂಡಗಳು ನ. 20 ಒಳಗಾಗಿ ದೇವಳದ ಕಚೇರಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು.

ADVERTISEMENT

ಮಾಹಿತಿಗೆ: 9482646275, ಸಂಪರ್ಕಿಸಬಹುದು ಅಥವಾ ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡಿ ನೊಂದಾಯಿಸಿಕೊಳ್ಳಬಹುದು’ ಎಂದರು.

ಭಕ್ತರ ಸಾಗರ: ಸರಣಿ ರಜೆಯ ಕಾರಣ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಭಕ್ತರ ಪ್ರವಾಹವೇ ಹರಿದು ಬಂದಿತ್ತು. ಜನದಟ್ಟಣೆಯಿಂದಾಗಿ ನೂರಾರು ಭಕ್ತರು ಆಶ್ಲೇಷ ಬಲಿ, ನಾಗಪ್ರತಿಷ್ಠೆ ಸೇರಿದಂತೆ ಇತರೆ ಸೇವೆ ಮಾಡಿಸಲು ಸಾಧ್ಯವಾಗದೆ, ಕೇವಲ ದೇವರ ದರ್ಶನ ಮಾಡಿ ತೆರಳಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.