ADVERTISEMENT

‘ಮೈಕ್ರೊಫೈನಾನ್ಸ್‌ ಸಾಲ ಮನ್ನಾ ಮಾಡಿ’

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 13:27 IST
Last Updated 21 ಫೆಬ್ರುವರಿ 2025, 13:27 IST
ಪುತ್ತೂರಿನ ಮಾಜಿ ಸೈನಿಕರ ಭವನದಲ್ಲಿ ಶುಕ್ರವಾರ ನಡೆದ ಮೈಕ್ರೋ ಸಾಲ ಸಂತ್ರಸ್ತರ ಸಮಾವೇಶದಲ್ಲಿ  ವಕೀಲ ಬಿ.ಎಂ.ಭಟ್  ಮಾತನಾಡಿದರು
ಪುತ್ತೂರಿನ ಮಾಜಿ ಸೈನಿಕರ ಭವನದಲ್ಲಿ ಶುಕ್ರವಾರ ನಡೆದ ಮೈಕ್ರೋ ಸಾಲ ಸಂತ್ರಸ್ತರ ಸಮಾವೇಶದಲ್ಲಿ  ವಕೀಲ ಬಿ.ಎಂ.ಭಟ್  ಮಾತನಾಡಿದರು   

ಪುತ್ತೂರು: ‘ಸರ್ಕಾರದ ನಿರ್ದೇಶನ, ಆರ್‌ಬಿಐ ಮಾರ್ಗಸೂಚಿ ಉಲ್ಲಂಘಿಸಿ, ದುಬಾರಿ ಬಡ್ಡಿದರ ವಿಧಿಸಿ ಅಕ್ರಮವಾಗಿ ಸಾಲ ನೀಡುತ್ತಾ ಬಂದಿರುವ ಮೈಕ್ರೋಫೈನಾನ್ಸ್ ವ್ಯವಹಾರವನ್ನು ನಿಲ್ಲಿಸಬೇಕು. ಮೈಕ್ರೊಫೈನಾನ್ಸ್‌ ಸಾಲವನ್ನು ಮನ್ನಾ ಮಾಡಬೇಕು ಹಾಗೂ ಉದ್ದೇಶ ಈಡೇರದ ಸಾಲವನ್ನು ರದ್ದುಗೊಳಿಸಬೇಕು’ ಎಂದು ಕರ್ನಾಟಕ  ರಾಜ್ಯ ಋಣಮುಕ್ತ ಹೋರಾಟ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ  ಬಿ.ಎಂ.ಭಟ್ ಆಗ್ರಹಿಸಿದರು.

ಪುತ್ತೂರಿನ ಮಾಜಿ ಸೈನಿಕರ ಭವನದಲ್ಲಿ ಶುಕ್ರವಾರ ನಡೆದ ಮೈಕ್ರೊಫೈನಾನ್ಸ್‌ ಸಾಲ ಸಂತ್ರಸ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರವು ಮೈಕ್ರೋಫೈನಾನ್ಸ್‌ ಸಾಲ ವಸೂಲಾತಿ ಪ್ರತಿಬಂಧಕ ಕಾಯ್ದೆ ಜಾರಿಗೆ ತಂದಿರುವುದು ಋಣಮುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ 2019 ರಿಂದ ನಿರಂತರವಾಗಿ 6 ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಲಭಿಸಿದ  ಜಯವಾಗಿದ್ದು, ಈ ಕಾನೂನಿಗೆ ಇನ್ನಷ್ಟು ಅಂಶಗಳು ಸೇರ್ಪಡೆಯಾಗಬೇಕಿವೆ’ ಎಂದರು.

ADVERTISEMENT

ವಕೀಲ ಪಿ.ಕೆ ಸತೀಶನ್ ಮಾತನಾಡಿದರು. ಋಣಮುಕ್ತ ಹೋರಾಟ ಸಮಿತಿಯ ಮುಖಂಡ ಶಾರದಾ, ಸುಮಯ್ಯ, ಪ್ರೇಮಾ ರಾಮಕುಂಜ ಮತ್ತಿತರರು ಇದ್ದರು. ಪುತ್ತೂರು ತಾಲ್ಲೂಕು ಸಮಿತಿಯ ಅಧ್ಯಕ್ಷೆ ಈಶ್ವರಿ ಅವರು ಸ್ವಾಗತಿಸಿದರು. ಡಿವೈಎಫ್ಐ ಮುಖಂಡ ಅಭಿಷೇಕ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.