ADVERTISEMENT

ವೀರೇಂದ್ರ ಹೆಗ್ಗಡೆಗೆ 75ನೇ ಜನ್ಮದಿನದ ಸಂಭ್ರಮ: ಹುಟ್ಟುಹಬ್ಬ ಸರಳವಾಗಿ ಆಚರಣೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 2:51 IST
Last Updated 25 ನವೆಂಬರ್ 2022, 2:51 IST
ಡಿ.ವೀರೇಂದ್ರ ಹೆಗ್ಗಡೆ
ಡಿ.ವೀರೇಂದ್ರ ಹೆಗ್ಗಡೆ   

ಧರ್ಮಸ್ಥಳ (ಉಜಿರೆ): ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ನ.25ರಂದು 75ನೇ ವರ್ಷಕ್ಕೆ ಕಾಲಿಡುತ್ತಿದ್ದು, ಸರಳ ರೀತಿಯಲ್ಲಿ ಜನ್ಮದಿನ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.

ದೇವಳದ ನೌಕರರು, ಊರಿನ ನಾಗರಿಕರು, ಭಕ್ತರು ಹಾಗೂ ಅಭಿಮಾನಿಗಳು ಹೆಗ್ಗಡೆ ಅವರಿಗೆ ಶುಭಾಶಯ ಅರ್ಪಿಸುವರು.

1948ರ ನವೆಂಬರ್ 25ರಂದು ಅಂದಿನ ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ದಂಪತಿಯ ಹಿರಿಯ ಮಗನಾಗಿ ಜನಿಸಿದ ವೀರೇಂದ್ರ ಕುಮಾರ್, 1968ರ ಅಕ್ಟೋಬರ್ 24 ರಂದು ತಮ್ಮ 21ನೇ ವಯಸ್ಸಿನಲ್ಲಿ ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ನೆಲ್ಯಾಡಿ ಬೀಡಿನ ಸಂಪ್ರದಾಯದಂತೆ ಪಟ್ಟಕ್ಕೆ ಏರಿದ್ದರು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.