ADVERTISEMENT

ಕಂಬಳ ಸಂಸ್ಕೃತಿಯ ಪ್ರತೀಕ: ಡಿ.ಕೆ.ಶಿವಕುಮಾರ್

ನರಿಂಗಾನ ಲವ- ಕುಶ ಕಂಬಳೋತ್ಸವ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 6:44 IST
Last Updated 12 ಜನವರಿ 2026, 6:44 IST
ನರಿಂಗಾನ ಕಂಬಳದ ಸಭಾ ಕಾರ್ಯಕ್ರಮವನ್ನು ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು
ನರಿಂಗಾನ ಕಂಬಳದ ಸಭಾ ಕಾರ್ಯಕ್ರಮವನ್ನು ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು   

ಉಳ್ಳಾಲ: ‘ಕಂಬಳ ಕ್ರೀಡೆಯು ದೇಶದ ಆಸ್ತಿ. ನಮ್ಮ ಸಂಸ್ಕೃತಿಯ ಪ್ರತೀಕ. ಕಂಬಳ ಸಂಸ್ಕೃತಿಯನ್ನ ಅನೇಕರು ಕಾಪಾಡಿ ಕೊಂಡು ಬಂದಿದ್ದಾರೆ. ಕೇವಲ ಅವರಿಂದಲೇ ಈ ಸಂಸ್ಕೃತಿಯ ಪೋಷಣೆ  ಕಷ್ಟ ಸಾಧ್ಯ. ಇದನ್ನು ಮುಂದುವರಿಸುವುದು ನಮ್ಮೆಲ್ಲರ ಜವಬ್ಧಾರಿ’ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.


ನರಿಂಗಾನದಲ್ಲಿ ಶನಿವಾರ ಏರ್ಪಡಿಸಿದ್ದ ನಾಲ್ಕನೇ ವರ್ಷದ ಹೊನಲು ಬೆಳಕಿನ ಲವ- ಕುಶ ಕಂಬಳೋತ್ಸವ ಸಭಾಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಅಧ್ಯಕ್ಷತೆಯನ್ನು ವಹಿಸಿದ್ದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ‘ಕಂಬಳ ಓಟ ಕೇವಲ ಮನರಂಜನೆಗೆ ಸೀಮಿತವಲ್ಲ.  ಕರಾವಳಿಯ ಜಾನಪದೀಯ ಹಾಗೂ ಈ ಮಣ್ಣಿನ ಸೌಹಾರ್ದತೆಯ ಕ್ರೀಡೆ ಇದಾಗಿದೆ. ಈ ಪರಂಪರೆಯನ್ನು ಉಳಿಸಿ ಮುಂದುವರಿಸಲು ಸರ್ಕಾರದ ಪ್ರೋತ್ಸಾಹ ಅಗತ್ಯವಿದೆ’ ಎಂದರು.

ADVERTISEMENT

ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ, ‘ಕಂಬಳದಲ್ಲಿ ಸೇರಿರುವ ಜನರ ಉತ್ಸಾಹ ನೋಡಿದಾಗ ಕಂಬಳದ ಮಹತ್ವ ಗೊತ್ತಾಗುತ್ತದೆ. ಸರ್ಕಾರ ಮುಂದಿನ ವರ್ಷದಿಂದ 24 ಕಂಬಳಗಳಿಗೂ ತಲಾ ₹5 ಲಕ್ಷ ಅನುದಾನ ಒದಗಿಸಲಿದೆ’ ಎಂದರು.

ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಎಐಸಿಸಿ ಕಾರ್ಯದರ್ಶಿ ಶ್ರೀನಿವಾಸ್, ಯುವ ಮುಖಂಡರಾದ ಮಿಥುನ್ ರೈ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ದ.ಕ.ಜಿಲ್ಲಾ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್,  ಶಾಸಕರಾದ ಸತೀಶ್ ಸೈಲ್‌,  ರಾಜು ಗೌಡ, ಮಾಜಿ ಸಚಿವ ರಮಾನಾಥ ರೈ, ಯೆನೆಪೋಯ ವಿಶ್ವವಿದ್ಯಾಲಯದ ಕುಲಾಧಿಪತಿ ಯೆನೆಪೋಯ ಅಬ್ದುಲ್ಲಾ ಕುಞಿ, ಕಣಚೂರು ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಣಚೂರು ಮೋನು, ಉದ್ಯಮಿ ಪ್ರಕಾಶ್ ಶೆಟ್ಟಿ, ಯುವ ಕಾಂಗ್ರೆಸ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಇಬ್ರಾಹಿಂ ನವಾಝ್, ಮುಖಂಡರಾದ ಮಂಜುನಾಥ್, ಮುನಿಯಾಲು, ಉದಯ ಕುಮಾರ್ ಶೆಟ್ಟಿ,  ಪದ್ಮರಾಜ ಆರ್ ಪೂಜಾರಿ, ನಿಗಮ್ ಭಂಡಾರಿ, ಬೆಳ್ತಂಗಡಿಯ ರಕ್ಷಿತ್ ಶಿವರಾಮ್, ಇನಾಯತ್ ಅಲಿ, ಮಾಲ ನಾರಾಯಣ, ಪ್ರಕಾಶ್ ಕಾಂಚನ್ ಮೊದಲಾದವರು ಭಾಗವಹಿಸಿದ್ದರು.


 ಟಿ.ಜಿ.ರಾಜಾರಾಂ ಭಟ್,  ಐಕಳಬಾವ ದೇವಿ ಪ್ರಸಾದ್ ಶೆಟ್ಟಿ, ಶಾಂತರಾಮ ಶೆಟ್ಟಿ, ಕಬಡ್ಡಿಪಟು ಧನಲಕ್ಷ್ಮೀ ಪೂಜಾರಿ, ಕ್ರೀಡಾ ಸಾಧಕ ಭಾಸ್ಕರ ದೇವಾಡಿಗ ಬೈಂದೂರು, ಗಣೇಶ್ ಪಂಬದ ಬಾಯಾರು, ಶೈಕ್ಷಣಿಕ ಸಾಧಕಿ ಅಪೇಕ್ಷಾ ಪುಂಡಿಕಾಯಿ, ಕರಾಟೆಪಟು ಆಯಿಷಾ, ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಮಿತ್ತಕೋಡಿ ವೆಂಕಪ್ಪ ಕಾಜವ ಅವರನ್ನು ಸನ್ಮಾನಿಸಲಾಯಿತು.


ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಸ್ವಾಗತಿಸಿದರು.  ಸತೀಶ್ ಪುಂಡಿಕಾಯಿ ಹಾಗೂ ಅಬ್ದುಲ್ ರಝಾಕ್ ಕುಕ್ಕಾಜೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.