ADVERTISEMENT

ಎಕ್ಸ್‌‍ಪರ್ಟ್: ದೀರ್ಘಾವಧಿ ನೀಟ್ ಕೋಚಿಂಗ್ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 5:22 IST
Last Updated 13 ಸೆಪ್ಟೆಂಬರ್ 2022, 5:22 IST
ದೀಪಾ
ದೀಪಾ   

ಮಂಗಳೂರು: ಎಕ್ಸ್‌ಪರ್ಟ್ ಕೋಚಿಂಗ್ ತರಬೇತಿಯಲ್ಲಿ ನೀಟ್ ದೀರ್ಘಾವಧಿ ಕೋಚಿಂಗ್ ಪಡೆದ ಶೇ 97.56ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.

ನಾಲ್ವರು ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕ, 13 ವಿದ್ಯಾರ್ಥಿಗಳು 550ಕ್ಕಿಂತ ಅಧಿಕ ಅಂಕ, 24 ಜನರು 500ಕ್ಕಿಂತ ಅಧಿಕ, 44 ಜನರು 450ಕ್ಕಿಂತ ಅಧಿಕ ಹಾಗೂ 60 ವಿದ್ಯಾರ್ಥಿಗಳು 400ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.

ಕಳೆದ ಬಾರಿ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದು, ವೈದ್ಯಕೀಯ ಶಿಕ್ಷಣ ಪ್ರವೇಶದಿಂದ ವಂಚಿತರಾದ ಮತ್ತು ತಮಗೆ ಬೇಕಾದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಸಿಗದ, ಪದವಿ ಪೂರ್ವ ಶಿಕ್ಷಣವನ್ನು ಬೇರೆ ಕಾಲೇಜುಗಳಲ್ಲಿ ಕಲಿತ ವಿದ್ಯಾರ್ಥಿಗಳು ಎಕ್ಸ್‌ಪರ್ಟ್‌ ಕೋಚಿಂಗ್ ಪಡೆದು ಸಾಧನೆ ಮಾಡಿದ್ದಾರೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

ADVERTISEMENT

ದೀಪಾ ರಾಜಶೇಖರ್ ಕುಳ್ಳೂರು –665 (ಹಿಂದಿನ ವರ್ಷದ ಅಂಕ 429), ರಕ್ಷಣ್ ರೈ –637 (470), ಮೋಹಿತ್ ಸಿ. ರಾಜು –619 (483), ಗಗನ್ ಜಿ.– 615 (466). ಉತ್ತಮ ಅಂಕ ಗಳಿಸಿದವರು– ಸಂಜನಾ, ರಾಹುಲ್ ಎಸ್.ಡಿ., ಶೆಟ್ಟಿ ಸನ್ನಿಧಿ ಮೋಹನ್, ಗೌತಮ್ ಗೌಡ, ಶಕೀಲ್ ಅಹಮದ್ ಇಮಾದ್, ಅಖಿಲಾ ಶೆಣೈ ಎಂ. , ಅಭಿಷೇಕ್ ಎಚ್.ಎ., ನವೀನ್ ಎಸ್.ಕಂಬಳಿ, ಹನನ್ ಮುಷ್ತಾಕ್ ಅಹ್ಮದ್, ಉದ್ಭವಿ ಗೌಡ ಎಸ್.ಎಂ., ರಾಮಿಕ್ ರಮೇಶ್ ಕುಮಾರ್ , ಪ್ರಕೃತಿ ಜನಾರ್ದನ ಶೆಟ್ಟಿ, ವರ್ಷಾ ಎನ್.ಆರ್., ವೈಷ್ಣವಿ, ಆದಿತ್ಯ ಕೆ.ಯು., ಪ್ರೀತಿ ಪಿ.ಎಂ., ಸಚಿನ್ ರಾಯಗೊಂಡ ಪೂಜಾರಿ, ಅಪೂರ್ವ ಎಸ್., ಸುಷ್ಮಾ ರಾಜೇಂದ್ರ ಆರ್., ಆರ್ಯ ಸ್ಮರಣ್ ಗೌಡ.

ಕಳೆದ ವರ್ಷ ದೀರ್ಘಾವಧಿ ನೀಟ್ ಕೋಚಿಂಗ್‍ಗೆ ಸೇರಿದ ಶೇ 90ರಷ್ಟು ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟ್‌ ದೊರೆತಿದೆ. ಈ ವರ್ಷವೂ ಅತ್ಯುತ್ತಮ ಫಲಿತಾಂಶ ಬಂದಿದ್ದು, ಬಹುತೇಕ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪ್ರವೇಶ ಸಿಗುವುದು ಬಹುತೇಕ ಖಚಿತ ಎಂದು ಪ್ರೊ.ನರೇಂದ್ರ ಎಲ್. ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.